Chikkaballapur : ಚಿಕ್ಕಬಳ್ಳಾಪುರ ನಗರದ ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ಶನಿವಾರದಿಂದ ಪ್ರಾರಂಭಗೊಂಡಿದ್ದ ಆಂಜನೇಯಸ್ವಾಮಿ ದೇವಾಲಯ ಪುನರ್ ನಿರ್ಮಾಣ ಹಾಗೂ ನಗರೇಶ್ವರಸ್ವಾಮಿ ಪ್ರತಿಷ್ಠಾಪನೆ ನೂತನ ವಿಮಾನ ಗೋಪುರ, ರಾಜಗೋಪುರಗಳ ಕುಂಭಾಭಿಷೇಕ (Pete Anjaneyaswamy Kumbhabhisheka) ಮಹೋತ್ಸವಕ್ಕೆ ಸೋಮವಾರ ಬೆಂಗಳೂರಿನ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಮ್ಮುಖದಲ್ಲಿ ತೆರೆ ಬಿದ್ದಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ “ಆರ್ಯವೈಶ್ಯ ಜನಾಂಗವು ಭಾರತೀಯ ಸಂಸ್ಕೃತಿಯ ಪ್ರಮುಖ ಜನಾಂಗವಾಗಿದ್ದು ವ್ಯಾಪಾರವನ್ನು ಮೂಲ ಕಸುಬಾಗಿ ಹೊಂದಿದೆ. ನಾವು ಸಮಾಜದ ಉನ್ನತಿಗೆ ನಮ್ಮದೇ ಆದ ನೆಲೆಯಲ್ಲಿ ಕೊಡುಗೆ ನೀಡಿದ್ದೇವೆ. ಜನಾಂಗ ವ್ಯಾಪಾರದಲ್ಲಿ ಯಶಸ್ಸು ಕಂಡಂತೆ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಬೇಕಿದೆ. ನಮ್ಮ ಸಮುದಾಯದ ನಾಯಕರನ್ನು ಗುರ್ತಿಸಿ ರಾಜಕೀಯ ಸ್ಥಾನಮಾನ ನೀಡಲು ಮುಂದಾಗಬೇಕಿದೆ. ರಾಜಕೀಯ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ಆರ್ಯವೈಶ್ಯ ಮಹಾಸಭೆಯೂ ಪ್ರಯತ್ನಿಸುತ್ತಿರುವುದು ಸಂತಸ ತಂದಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ದೇವಾಲಯ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.