Srinivaspura : ತೈಲ ದರ ಏರಿಕೆ (Petrol Price Hike) ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲ್ಲೂಕು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು,(BJP JDS Protest) ಕಾರ್ಯಕರ್ತರು ಗುರುವಾರ ಶ್ರೀನಿವಾಸಪುರ ಪಟ್ಟಣದ ಇಂದಿರಾಭವನ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲರೆಡ್ಡಿ “.ನಿರೀಕ್ಷಿತ ಮಟ್ಟದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿಲ್ಲವೆಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿ ಜನಸಾಮಾನ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಅಬಕಾರಿ ತೆರಿಗೆ ಏರಿಕೆ ಮಾಡಿದೆ. ಹಾಲು, ಮೊಸರು, ಮುದ್ರಾಂಕ ಶುಲ್ಕವನ್ನು ಹೆಚ್ಚು ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹಣವನ್ನು ಯಾವುದೇ ಮಾಹಿತಿ ಇಲ್ಲದೇ ಖರ್ಚು ಮಾಡುತ್ತಿದೆ” ಎಂದು ತಿಳಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ, ಉಪಾಧ್ಯಕ್ಷ ಬಾಬುರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾಗಭೂಷಣ್, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮುಖಂಡರಾದ ಲಕ್ಷಣಗೌಡ, ಶಿವಣ್ಣ, ಪೂಲ್ ಶಿವಾರೆಡ್ಡಿ, ಬೈರಪಲ್ಲಿ ರಘು, ಬೈರೆಡ್ಡಿ, ಷಫೀವುಲ್ಲಾ, ಪ್ರಶಾಂತರೆಡ್ಡಿ, ಹೋಳುರು ಸಂತೋಷ್ ಇದ್ದರು.