Gauribidanur : ಉತ್ತರ ಪಿನಾಕಿನಿ ನದಿ (Pinakini River) ಸ್ವಚ್ಛತೆಗೆ (Cleaning) ಸಂಬಂಧಿಸಿದಂತೆ ಗೌರಿಬಿದನೂರು ನಗರದ ತಾಲ್ಲೂಕು ಕಚೇರಿಯಲ್ಲಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ರವರಿಗೆ ಮನವಿ (Request) ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ “ನದಿ ಮೂಲಗಳು ಹಾಗೂ ಜಲ ಮೂಲಗಳು ಸ್ವಚ್ಛವಾಗಿದ್ದರೆ ಅಲ್ಲಿ ನಾಗರಿಕತೆ ಬೆಳೆಯುತ್ತದೆ. ಇಲ್ಲದಿದ್ದರೆ ನಾಗರಿಕತೆ ನಶಿಸುತ್ತದೆ. ನಾಮಗೊಂಡ್ಲು ಗ್ರಾಮದ ಸ್ಮಶಾನಗಳಲ್ಲಿ ಗಿಡ ಮರಗಳು ಬೆಳೆದು ಸಮಸ್ಯೆಯಾಗಿದ್ದು ಸ್ಮಶಾನ ಸ್ವಚ್ಛಕ್ಕೆ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಗೌರಿಬಿದನೂರು ಪಿನಾಕಿನಿ ಬೀಡು ಎಂಬ ಹೆಸರಿಗೆ ಪಾತ್ರವಾಗಿದೆ. ಆದ್ದರಿಂದ ಎಲ್ಲರೂ ಸಭೆಗೆ ಬಂದು ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸಹಕರಿಸಬೇಕು” ಎಂದು ಹೇಳಿದರು.
ಕನ್ನಡ ಸಂಘಟನೆಗಳ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.