Chikkaballapur : ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ಪಿಎಲ್‌ಡಿ ಬ್ಯಾಂಕ್‌ನ ವಾರ್ಷಿಕ ಸರ್ವಸದಸ್ಯರ ಮಹಾಸಭೆ (PLD Bank Annual Meeting) ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ” ಕೆ.ಬಿ.ಪಿಳ್ಳಪ್ಪ ಹಾಗೂ ಸಿ.ವಿ.ವೆಂಕಟರಾಯಪ್ಪ ಅವರು ನನಗೆ ಸ್ಫೂರ್ತಿದಾಯಕ ನಾಯಕರಾಗಿದ್ದು ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿರಿಯ ನಾಯಕರ ಕೊಡುಗೆ ಅಪಾರವಾಗಿದೆ. ಸಂಕ್ರಾಂತಿಯ ಒಳಗೆ ಪಿಎಲ್‌ಡಿ ಬ್ಯಾಂಕ್‌ನ ಎದುರು ಪಿಳ್ಳಪ್ಪ ಅವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅಗತ್ಯವಿರುವ ತಯಾರಿಯನ್ನು ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ನಡೆಸಬೇಕು. ಕೆ.ಬಿ.ಪಿಳ್ಳಪ್ಪ ಅವರ ಹೆಸರನ್ನು ಪಿಎಲ್‌ಡಿ ಬ್ಯಾಂಕ್ ರಸ್ತೆಗೆ ನಾಮಕರಣ ಮಾಡಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಬ್ಯಾಂಕಿನ ಅಧ್ಯಕ್ಷ ಕಾಳೇಗೌಡ, ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ವ್ಯವಸ್ಥಾಪಕ ಎ.ಗೋಪಾಲಕೃಷ್ಣ ಹಾಗೂ ನಿರ್ದೇಶಕರು ಸೇರಿ ಅಪಾರ ಜನರು ಪಾಲ್ಗೊಂಡಿದ್ದರು.