Home Sidlaghatta ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪೊಲೀಸ್ ವ್ಯಾನ್

ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪೊಲೀಸ್ ವ್ಯಾನ್

0
367

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿಯಲ್ಲಿ ಬಂದೋಬಸ್ತ್‌ ಗಾಗಿ ನಿಯೋಜಿಸಿದ್ದ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಮಿನಿ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಬೈರಗಾನಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ನಾರಾಯಣಸ್ವಾಮಿಯ ಕೊಲೆ ನಂತರ ಬೈರಗಾನಹಳ್ಳಿಯಲ್ಲಿ ಬಂದೋಬಸ್ತ್‌ ಗಾಗಿ ಈ ಪೊಲಿಸ್ ಪಡೆಯನ್ನು ನಿಯೋಜಿಸಲಾಗಿತ್ತು.

ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ಕರೆದುಕೊಂಡು ಬೈರಗಾನಹಳ್ಳಿಗೆ ಹೋಗುವಾಗ ದ್ಯಾವಪ್ಪನಗುಡಿ ಬಳಿ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲುಹೋಗಿ ಪೊಲೀಸರ ವ್ಯಾನ್ ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ.

ಆದರೆ ವ್ಯಾನಿನಲ್ಲಿ ಪೊಲೀಸರೆ ಇರಲಿಲ್ಲ, ಚಾಲಕನಷ್ಟೆ ಇದ್ದ, ಹಾಗಾಗಿ ಉರುಳಿ ಬಿದ್ದ ವ್ಯಾನಿನಲ್ಲಿದ್ದ ಪೊಲೀಸರಿಗೆ ಗಾಯಗಳಾಗಿವೆ ಎನ್ನುವುದೆಲ್ಲಾ ಸುಳ್ಳು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಸಂಜೆಯಾದರೂ ಈ ಬಗ್ಗೆ ಯಾವುದೇ ದೂರಾಗಲಿ, ಸಾರ್ವಜನಿಕ ಆಸ್ಪತ್ರೆಗೆ ಯಾರೇ ಗಾಯಗೊಂಡ ಪೊಲೀಸರಾಗಲೀ ದಾಖಲಾಗಿಲ್ಲ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!