Chintamani : ತೋಟಗಾರಿಕೆ ಮಿಷನ್ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಪಾಲಿಹೌಸ್ (Pollyhouse), ವೈಯಕ್ತಿಕ ನರ್ಸರಿ (Nursery), ಪರಿಶಿಷ್ಟಜಾತಿ ವರ್ಗದಡಿ ಪಾಲಿಹೌಸ್ ಘಟಕ ನಿರ್ಮಾಣ, ನೆರಳು ಪರದೆ ಘಟಕ, ಪಾಲಿಹೌಸ್ ನಿರ್ಮಾಣದ ಸಹಾಯಧನಕ್ಕಾಗಿ (Subsidy) ಅರ್ಜಿ (Application) ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ.
ಚಿಂತಾಮಣಿಯ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.