Home Sidlaghatta PUC ಪರೀಕ್ಷೆಯಲ್ಲಿ ರೈತರ ಮಕ್ಕಳ ಸಾಧನೆ

PUC ಪರೀಕ್ಷೆಯಲ್ಲಿ ರೈತರ ಮಕ್ಕಳ ಸಾಧನೆ

0
885

Sidlaghatta : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರೈತನ ಮಗ ಹೆಚ್ಚು ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮನಾಗಿದ್ದಾನೆ.

ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎನ್.ದರ್ಶನ್ 586 (97.67%) ಪಡೆದಿದ್ದಾನೆ. ತಾಲ್ಲೂಕಿನ ಸೊಣ್ಣೇನಹಳ್ಳಿಯ ರೈತ ನಾರಾಯಣಸ್ವಾಮಿ ಅವರ ಮಗ ದರ್ಶನ್ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಗ್ರಾಮೀಣ ಭಾಗದ ರೈತ ಕುಟುಂಬದ ಮಕ್ಕಳಿಗೆ ಸ್ಫೂರ್ತಿ ತುಂಬಿದ್ದಾನೆ.

ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಪಿಯು ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಸಿ.ವಿ. ಅನನ್ಯ 584 (97.33%) ಕೂಡ ರೈತ ಕುಟುಂಬದ ಹೆಣ್ಣುಮಗಳಾಗಿದ್ದು, ತಾಲ್ಲೂಕಿನ ಚೀಮನಹಳ್ಳಿಯ ರೈತ ವೆಂಕಟೇಶ್ ಅವರ ಮಗಳು. ಅದೇ ಕಾಲೇಜಿನ ವಿದ್ಯಾರ್ಥಿನಿ ಟಿ.ಲಾವಣ್ಯ 583 (97.17%), ತಾಲ್ಲೂಕಿನ ಶೆಟ್ಟಿಹಳ್ಳಿಯ ನಿವಾಸಿಯಾಗಿದ್ದು, ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡಿರುವುದರಿಂದ ಸೋದರ ಮಾವಂದಿರ ಆಶ್ರಯದಲ್ಲಿದ್ದಾಳೆ.

“ರೈತ ಕುಟುಂಬದ ಹಿನ್ನೆಯ ಮಕ್ಕಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾರೆ. ಈ ಮಕ್ಕಳು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಇವರ ಸಾಧನೆ ಹಳ್ಳಿ ಮಕ್ಕಳಿಗೆ ಪ್ರೇರಣೆಯಾಗಿದೆ” ಎಂದು ಬಿಜಿಎಸ್ ಪ್ರಾಂಶುಪಾಲ ಮಹದೇವ್ ತಿಳಿಸಿದರು.


Farmer’s Son Tops Taluk in Second PUC Exam, Inspires Rural Students

Sidlaghatta : A farmer’s son has topped the taluk in the second PUC exam, securing the highest marks in PCMB. SN Darshan, who hails from Sonnenahalli in the taluk and is a student of BGS PU College near Hanumanthapura Gate, scored 586 (97.67%). His achievement has served as an inspiration to children from rural farming families.

Two other students from the same college have also secured high marks. C.V. Ananya, daughter of farmer Venkatesh of Cheemanahalli, taluk, scored 584 (97.33%), while T. Lavanya, who has lost both her parents and resides in Shettihalli in the taluk under the shelter of her brother-in-law, scored 583 (97.17%). All three students are preparing for the medical entrance exam.

Principal Mahadev of BGS College praised the exceptional performance of students from farming backgrounds and said that their achievements would inspire other children in the village.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!