April17ಕ್ಕೆ ಜಿಲ್ಲೆಗೆ ರಾಹುಲ್‌ ಗಾಂಧಿ

- Advertisement -
- Advertisement -

Malur : ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ (Kolar Lokasabha Election) ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಪರ ಮತ ಪ್ರಚಾರಕ್ಕಾಗಿ ಮಾಲೂರು ಪಟ್ಟಣದ ಮಾಲೂರು- ಹೊಸಕೋಟೆ ರಸ್ತೆಯ ಬಳಿ April 17ರಂದು ನಡೆಯಲಿರುವ Congress ಪಕ್ಷದ ಸಮಾವೇಶಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಬರಲಿದ್ದು ಸಿದ್ಧತೆಗಳ ಬಗ್ಗೆ ಭಾನುವಾರ ಕಾಂಗ್ರೆಸ್‌ ರಾಜ್ಯ ಚುನಾವಣಾ ಉಸ್ತುವಾರಿ ಅಭಿಷೇಕ್ ದತ್ತ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ದತ್ತ “ಬಿಜೆಪಿ ಜನಸಾಮಾನ್ಯರಿಗಾಗಿ ಯಾವುದೇ ಯೋಜನೆಗಳು ಅನುಷ್ಠಾನ ಗೊಳಿಸಿಲ್ಲ. ಇದೊಂದು ಸುಳ್ಳಿನ ಸರ್ಕಾರ. ಅಭಿವೃದ್ಧಿ ಮರೀಚಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳುಗಳನ್ನು ಹೇಳುವ ಮೂಲಕ ಆಡಳಿತವನ್ನು ನಡೆಸುತ್ತಿದ್ದಾರೆ. ಜನರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಇಪ್ಪತ್ತಕ್ಕೂ ಹೆಚ್ಚು ಸಂಸದರನ್ನು ರಾಜ್ಯದ ಆಯ್ಕೆ ಮಾಡಲಿದ್ದಾರೆ. 17ರಂದು ಮತಯಾಚನೆ ಮಾಡಲು ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಸೇರಿದಂತೆ ಸಚಿವರು ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ” ಎಂದು ತಿಳಿಸಿದರು.

ಶಾಸಕ ಕೆ.ವೈ. ನಂಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ. ಮಧುಸೂದನ್, ಎಚ್.ಎಂ. ವಿಜಯನಸಿಂಹ ಕೆಪಿಸಿಸಿ ಸದಸ್ಯರಾದ ಸೋಮಶೇಖರ್, ಪ್ರದೀಪ್ ರೆಡ್ಡಿ, ಮುಖಂಡರಾದ ಎಚ್.ವಿ. ಚಂದ್ರಶೇಖರ್ ಗೌಡ, ಸತೀಶ್ ರಾಜಣ್ಣ, ಶಬೀರ್, ತನ್ವೀರ್ ಅಹ್ಮದ್, ನಾಗರಾಜ್ ಮತ್ತಿತ್ತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!