Chikkaballapur : ಮಾರ್ಗಶಿರ ಹುಣ್ಣಿಮೆ ಅಂಗವಾಗಿ ಮಂಗಳವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ರಂಗಸ್ಥಳದಲ್ಲಿ (Rangasthala) ರಂಗನಾಥ ಸ್ವಾಮಿ (Shri Ranganatha Swamy Temple) ಬ್ರಹ್ಮ ರಥೋತ್ಸವ (Brahma Rathostsava) ಅದ್ಧೂರಿಯಾಗಿ ನೆರವೇರಿತು.
ರಥೋತ್ಸವದ ಅಂಗವಾಗಿ ದೇವರಿಗೆ ಮತ್ತು ದೇಗುಲಕ್ಕೆ ವಿಶೇಷ ಅಲಂಕಾರ ಮಾಡಿ ರಂಗನಾಥ ಸ್ವಾಮಿಗೆ ವಿವಿಧ ಪೂಜೆ ಮತ್ತು ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ರಥೋತ್ಸವಕ್ಕೆ ಚಾಲನೆ ದೊರೆತಿದ್ದು ರಥವನ್ನು ಭಕ್ತರು ಎಳೆದರು.
ರಥೋತ್ಸವದಲ್ಲಿ ತಿಪ್ಪೇನಹಳ್ಳಿ, ಬೋದಗಾನಹಳ್ಳಿ, ಕಣಜೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪಾಲ್ಗೊಂಡ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯವರೆಗೂ ಭಕ್ತರು ದೇವರ ದರ್ಶನಕ್ಕೆ ಬಂದರು.