Gauribidanur : ಸೋಮವಾರ ಗೌರಿಬಿದನೂರು ತಾಲ್ಲೂಕಿನ ಗಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮುದುಗಾನಕುಂಟೆ ಧಾರ್ಮಿಕ ಕ್ಷೇತ್ರಕ್ಕೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ದಾನಿಗಳ ಸಹಕಾರದಿಂದ ನಡೆಸುವ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ ” ಪ್ರತೀ ಸೋಮವಾರ ಮುದುಗಾನಕುಂಟೆ ಗಂಗಾಭಾಗೀರಥಿ ದೇವಾಲಯಕ್ಕೆ ಅನೇಕ ಭಕ್ತರು ಆಗಮಿಸುವರು, ಆದ್ದರಿಂದ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಸುಮಾರು ₹ 1.85 ಕೋಟಿ ಅನುದಾನವನ್ನು ನೀಡಲಾಗಿದ್ದು ಸಂಬಂದಿತ ಕಾಮಗಾರಿಗಳನ್ನು ಪರಿಶೀಲಿಸಲು ಮುದುಗಾನಕುಂಟೆ ದೇವಾಲಯಕ್ಕೆ ಭೇಟಿ ನೀಡಲಾಗಿದೆ. ಗೌರಿಬಿದನೂರು ಸೇವಾ ಪ್ರತಿಷ್ಠಾನದಿಂದ ನಡೆದಿರುವ ಕೆರೆಯ ಪುನಶ್ಚೇತನದಿಂದ ಮಳೆ ನೀರು ಶೇಖರಣೆಗೊಂಡು ಅಂತರ್ಜಲ ವೃದ್ಧಿಯಾಗಲಿದೆ ” ಎಂದು ಹೇಳಿದರು.
ಕಂದಾಯ ಅಧಿಕಾರಿಗಳು ಅನ್ನಸಂತರ್ಪಣಾ ಜವಾಬ್ದಾರಿಯನ್ನು ನೋಡಿಕೊಳಲ್ಲಿದ್ದಾರೆ. ಅನ್ನಸಂತರ್ಪಣೆಗೆ ಸಹಕಾರ ನೀಡಬಯಸುವ ದಾನಿಗಳು ದೇವಾಲಯದಲ್ಲಿನ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಎಚ್.ಶ್ರೀನಿವಾಸ್ ತಿಳಿಸಿದರು.
ಕೆಎಎಸ್ ಅಧಿಕಾರಿ ಪಿ.ಎಸ್.ರಾಜೇಶ್ವರಿ, ಪಿಡಿಒ ಎಲ್.ರೂಪಾ, ಕಂದಾಯ ನಿರೀಕ್ಷಕ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಮಂಜುಳಾ, ಅನಿಲ್ ಕುಮಾರ್, ನಂಜುಂಡಸ್ವಾಮಿ, ಪಿಎಸೈ ಮೋಹನ್ ಕುಮಾರ್, ಲಕ್ಷ್ಮಿನಾರಾಯಣ್, ಸೇವಾ ಪ್ರತಿಷ್ಟಾನದ ಸದಸ್ಯ ಆರ್.ಜೆ.ಶ್ರೇಣಿಕ್, ವೇಣುಗೋಪಾಲ್, ದಯಾನಂದ್, ಉಪೇಂದ್ರ, ಶಿವಾರೆಡ್ಡಿ, ವಿಜಯ್ ಕುಮಾರ್, ಸಂಜೀವರೆಡ್ಡಿ, ಜಯರಾಮರೆಡ್ಡಿ, ನರಸಿಂಹರೆಡ್ಡಿ ಆಯುಕ್ತರ ಜೊತೆ ದೇವಾಲಯಕ್ಕೆ ಭೇಟಿ ನೀಡಿದರು.