Chikkaballapur : ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಜಿಲ್ಲಾ ಕೇಂದ್ರ ಅಂಚೆ ಕಚೇರಿ ಎದುರು ಏಳನೇ ವೇತನ ಆಯೋಗ ಜಾರಿ, ಕಮಲೇಶ್ ಚಂದ್ರ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು (Rural postal employees) ಅನಿರ್ಧಿಷ್ಟಾವಧಿ ಪ್ರತಿಭಟನೆ (Protest) ಪ್ರಾರಂಭಿಸಿದ್ದಾರೆ.
ನ್ಯಾಷನಲ್ ಯೂನಿಯನ್ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ “ಏಳನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಕಮಲೇಶ್ ಚಂದ್ರ ವರದಿ ಜಾರಿ, ಸಮಾನ ಕೆಲಸಕ್ಕೆ ಸಮಾನ ವೇತನ, ನಿವೃತ್ತಿ ವೇತನ ನೀಡಿ 12, 24, 36 ವರ್ಷ ಸೇವೆ ಸಲ್ಲಿಸಿದವರಿಗೆ ಭಡ್ತಿ ನೀಡಬೇಕು. ನೂತನ ನೇಮಕಾತಿ ಆದ ನೌಕರರಿಗೆ ಕೆಲಸದ ಆಧಾರಿತವಾಗಿ ವೇತನ ನಿಗದಿಗೊಳಿಸಿ ಎಲ್ಲ ಬಿಒಗಳಿಗೆ ಲ್ಯಾಪ್‌ಟಾಪ್, ಪ್ರಿಂಟರ್ ನೀಡಬೇಕು”ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನೌಕರರಾದ ಉಷಾರಾಣಿ, ಟಿ.ಎನ್.ವಿಜಯಶಂಕರ್, ಗಂಗ ರಾಜು, ಗೋಪಾಲ್, ಮಂಜುನಾಥ್, ರಾಮಪ್ಪ, ಕೃಷ್ಣಮೂರ್ತಿ, ಬಾಲಕೃಷ್ಣ, ಸ್ವರೂಪ, ಮುನಿರಾಜು, ಸುಧಾರಾಣಿ, ಶ್ಯಾಮಲ ಮತ್ತಿತರರು ಪಾಲ್ಗೊಂಡಿದ್ದರು.