Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ (Muddenahalli) ಸತ್ಯಸಾಯಿ ಗ್ರಾಮದ (Satya Sai Grama) ಸದ್ಗುರು ಮಧುಸೂದನ ಸಾಯಿ (Sadguru Madhusudhana Sai) ಅವರಿಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು (Karnataka State Dr. Gangubhai Hangal Music and Performing Arts University Mysore ) ಗೌರವ ಡಾಕ್ಟರೇಟ್ (Honorary Doctorate) ನೀಡಿದೆ.
ಅಕ್ಟೋಬರ್.18 ರಂದು ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ವಿಶ್ವವಿದ್ಯಾಲಯದ 5 ಮತ್ತು 6ನೇ ಘಟಿಕೋತ್ಸವವು ನಡೆಯಲಿದ್ದು ಅಂದು ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಕ್ಷೇತ್ರದಲ್ಲಿನ ಸತ್ಯಸಾಯಿ ಆಶ್ರಮ ಮತ್ತು ಸದ್ಗುರು ಅವರ ಕ್ರಾಂತಿಕಾರಕ ಸುಧಾರಣೆಗಳ ಕಾರಣ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡುವರು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.