Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಶಂಕರಾಚಾರ್ಯರು (Shankaracharya) ಮತ್ತು ಭಗೀರಥ ಮಹರ್ಷಿ (Bhageeratha Maharshi) ಅವರ ಜಯಂತಿ (Jayanthi) ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ “ಭಾರತಾದ್ಯಂತ ಅದ್ವೈತ ಸಿದ್ದಾಂತವನ್ನು ಪ್ರಚಾರಪಡಿಸುವ ಮೂಲಕ ಹಿಂದೂ ಧರ್ಮದ ಪುನರುಜ್ಜೀವನದಲ್ಲಿ ಶಂಕರಾಚಾರ್ಯರ ಪಾತ್ರ ಅಪಾರವಾದುದು. ಸೌಂದರ್ಯ ಮತ್ತು ಯವ್ವನದ ಬಗ್ಗೆ ಹೆಚ್ಚು ಹೆಮ್ಮೆ ಪಡಬಾರದು ಎಂಬುದನ್ನು ಬೋಧಿಸಿದ ಶಂಕರಾಚಾರ್ಯರರು ಜ್ಞಾನಕ್ಕಿಂತ ಮಿಗಿಲಾದುದು ಜಗತ್ತಿನಲ್ಲಿ ಬೇರೊಂದಿಲ್ಲ ಮತ್ತು ಹಣಕ್ಕೆ ಹೆಚ್ಚು ಮಹತ್ವ ನೀಡಬಾರದು. ದೇಶದ ನಾಲ್ಕು ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅತ್ಯಂತ ಕಡಿಮೆ ಜೀವಿತಾವಧಿಯಲ್ಲಿ ಹೆಚ್ಚು ಸಾಧನೆ ಗೈದರು. ಅವರು ಪ್ರಸ್ತುತ ದೇಹವನ್ನು ಮಾತ್ರ ತ್ಯಜಿಸಿದ್ದಾರೆ. ಆದರೆ ಅವರ ಸಾಧನೆಗಳು, ವಿಚಾರಗಳು, ಆದರ್ಶಗಳು ಭೂಮಿ ಇರುವವರೆಗೂ ಜೀವಂತವಾಗಿರುತ್ತವೆ” ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ಮನಿಷ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ, ಸಮುದಾಯದ ಮುಖಂಡರಾದ ಮೊಕ್ಷಗೊಂಡ ವೇಣು ಗೋಪಾಲ, ಜಯಪ್ರಕಾಶ, ದೇವಾಶಾಸ್ತ್ರಿ, ಅನುಪಮಾ ನಾಗಭೂಷಣ್, ಶ್ರೀನಾಥ್, ನಳಿನ, ಕೃಷ್ಣಪ್ಪ, ಗಂಗಾಧರ ಮತ್ತಿತರರು ಪಾಲ್ಗೊಂಡಿದ್ದರು.