Home Chikkaballapur ಶಾಂತಾ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ

ಶಾಂತಾ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ

0
231
Chikkaballapur Peresandra Shanta Nursing College oath taking program

Chikkaballapur : ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ನರ್ಸಿಂಗ್ ಕಾಲೇಜಿನಲ್ಲಿ (Shanta Nursing College) ಸೋಮವಾರ ವೈಟ್ ಕೊಟ್, 2022-23ನೇ ಸಾಲಿನ ಬಿ.ಎಸ್ಸಿ, ನರ್ಸಿಂಗ್, BPT ಮತ್ತು BHS ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ (Oath Taking) ಬೋಧಿಸುವ ಸಮಾರಂಭ ಹಮ್ಮಿಕೊಲಾಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಸುಧಾಕರ್ (Dr K Sudhakar) ‘ನೀವೂ (ವಿದ್ಯಾರ್ಥಿಗಳು) ಸೇವಾ ಮನೋಭಾವದಿಂದದ ಶುಶ್ರೂಷಕರಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿರುತ್ತೀರ. ಈ ಪ್ರತಿಜ್ಞೆಯನ್ನು ಸೇವೆ ಮಾಡುವ ಪ್ರತಿ ಕ್ಷಣ ನೆನಪಿಸಿಕೊಂಡು ಅದೇ ರೀತಿ ನಡೆಯಬೇಕು. ತಾಯಿಯಂತೆ ರೋಗಿಗಳಿಗೆ ಶುಶ್ರೂಷೆ ನೀಡಿ ಆರೈಕೆ ಮಾಡುವ ಆತ್ಮವಿಶ್ವಾಸ ಬೆಳೆಸುವ ಮಹತ್ವದ ಕಾರ್ಯವನ್ನು ನೀವು ಮಾಡುತ್ತೀರಿ. ಶಿಕ್ಷಣ ಎಂದರೆ ಬೃಹತ್ ಕಟ್ಟಡಗಳಲ್ಲ, ದೊಡ್ಡ ವ್ಯಕ್ತಿತ್ವವನ್ನು ರೂಪಿಸುವ ಸಾಧನ ಹಾಗೂ ಶಾಶ್ವತ ಕಾರ್ಯಕ್ರಮ. ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ, ಕೌಶಲಗಳು, ಸೇವಾಮನೋಭಾವ ಹಾಗೂ ಕೂಡಿ ಬಾಳುವ ಮನಸ್ಸನ್ನು ಬೆಳೆಸಬೇಕು ’ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ಶಿಕ್ಷಣ ವಿಶ್ವವಿದ್ಯಾಲಯದ ಡೀನ್ ಡಾ.ಬಿಂದು ಮ್ಯಾಥ್ಯೂ, ರಾಜೀವ್ ಗಾಂಧಿ ಆರೋಗ್ಯ ಶಿಕ್ಷಣ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ರಾಮಕೃಷ್ಣಾರೆಡ್ಡಿ, ಜೀವನ್ ಮತ್ತು ಅನನ್ಯ ಆಸ್ಪತ್ರೆಗಳ ಸಂಸ್ಥಾಪಕ ಡಾ.ಐ.ಎಸ್.ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್. ಮಹೇಶ್‌ಕುಮಾರ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ರಮೇಶ್‌, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಸೈಮನ್, ಸಂಸ್ಥೆ ನಿರ್ದೇಶಕ ಕೋಡಿರಂಗಪ್ಪ, ಸುಬ್ರಮಣ್ಯ, ಡಾ.ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!