Home Sidlaghatta ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದ ಆರ್.ಲತಾ ಅವರಿಗೆ ಅಭಿನಂದಿನೆ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದ ಆರ್.ಲತಾ ಅವರಿಗೆ ಅಭಿನಂದಿನೆ

0
226

Sidlaghatta : ಶಿಡ್ಲಘಟ್ಟ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಮಂಜೂರು ಮಾಡಿಸಿದ್ದಾಗಿ ಆಗಿನ ಜಿಲ್ಲಾಧಿಕಾರಿ ಆರ್.ಲತಾ ಅವರನ್ನು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿದ್ದಾರೆ.

ಈ ಕುರಿತು, ಬೆಂಗಳೂರು ನಗರದ ಮಕ್ಕಳ ರಕ್ಷಣಾ ನಿರ್ದೇಶಕರ ಕಚೇರಿಯಲ್ಲಿ ನಿರ್ದೇಶಕಿ ಆಗಿರುವ ಆರ್.ಲತಾ ಅವರನ್ನು ಶಿಡ್ಲಘಟ್ಟದ ಸಂಘಟನೆಗಳ ಸದಸ್ಯರು ಭೇಟಿ ಮಾಡಿ, ಅವರಿಗೆ ಅಭಿನಂದನೆ ಸಲ್ಲಿಸಿದರು. ಹೂಗುಚ್ಚ, ಶಾಲು ಹಾಕಿ ಹಾಗೂ ಹಣ್ಣು ಹಂಪಲು ನೀಡಿ ಅವರನ್ನು ಸನ್ಮಾನಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ಐ.ಎನ್‌.ಟಿ.ಯು.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ದಲಿತ ಸಂಘರ್ಷ ಸೇನೆಯ ಜಿಲ್ಲಾ ಕಾರ್ಯದರ್ಶಿ ನಾಗನರಸಿಂಹ, ನಗರಾಧ್ಯಕ್ಷ ಕೆ.ನಾರಾಯಣಸ್ವಾಮಿ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ ಹಾಗೂ ನಾಗರಾಜ್ ಹಾಜರಿದ್ದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಆರ್.ಲತಾ ಅವರ ಪರಿಶ್ರಮ ಹಾಗೂ ಕಠಿಣ ಪರಿಶ್ರಮವನ್ನು ಸಂಘಟನೆಗಳು ಪ್ರಶಂಸಿಸಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!