Home News ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಆಹ್ವಾನ ನೀಡಿದ ಸ್ವಾಮೀಜಿಗಳು

ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಆಹ್ವಾನ ನೀಡಿದ ಸ್ವಾಮೀಜಿಗಳು

0
726
Sidlaghatta Ambigara Chowdayya Mutt Invitation

Sidlaghatta : ಶಿಡ್ಲಘಟ್ಟ ನಗರದ ಅರಳೇ ಪೇಟೆಯಲ್ಲಿರುವ ಗಂಗಾಭವಾನಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅಂಬಿಗರ ಚೌಡಯ್ಯ ಮಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯ ಕಂಚಾರಗಟ್ಟಿಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಮುಂಬರುವ ಜನವರಿ 14 ಮತ್ತು 15 ರಂದು ನಡೆಯಲಿರುವ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾ ರಥೋತ್ಸವದಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಹಾವೇರಿ ಜಿಲ್ಲೆಯ ನರಸೀಪುರದ ಕಂಚಾರಗಟ್ಟಿಯಲ್ಲಿ 2012 ರಲ್ಲಿ ಸ್ಥಾಪನೆಯಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಅಂದಿನಿಂದ ಈವರೆಗೂ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ. ಕೋಲಿ, ಬೆಸ್ತ ಮುಂತಾದ 32 ಪರ್ಯಾಯ ಹೆಸರುಗಳಿಂದ ಸಮುದಾಯವನ್ನು ಕರೆಯಲಾಗುತ್ತಿದ್ದು ದಮುದಾಯ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದುವೆರಯಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.

ಶ್ರೀ ನಿಜಚರಣ ಅಂಬಿಗರ ಚೌಡಯ್ಯ ರಥೋತ್ಸವದಲ್ಲಿ ವಚನ ಗ್ರಂಥಗಳನ್ನು ಇಟ್ಟು ಮೆರವಣಿಗೆ ಮಾಡುವ ಏಕೈಕ ರಥೋತ್ಸವ ಇದಾಗಿದೆ. ಜನವರಿ 15 ರ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕ ಸರಳ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದು ಆಸಕ್ತಿಯುಳ್ಳವರು ಹೆಸರು ನಮೂದಿಸಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗಳನ್ನು ನಗರದ ಬಸ್ ನಿಲ್ದಾಣದಿಂದ ಮೆರವಣಿಗೆಯ ಮೂಲಕ ಸಮುದಾಯದವರು ಬರಮಾಡಿಕೊಂಡರು.

ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಜಯರಾಂ, ತಾಲ್ಲೂಕು ಅಧ್ಯಕ್ಷ ಶಿವಣ್ಣ, ಗಂಗಮ್ಮ ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಕ್ಷೀನಾರಾಯಣ(ಲಚ್ಚಿ), ಸಮುದಾಯದ ಮುಖಂಡರಾದ ಅಪ್ಪಿ, ಲಕ್ಷ್ಮೀನಾರಾಯಣ, ಗೋಪಾಲ್, ಶ್ರೀನಾಥ್, ಶ್ರೀರಾಮ, ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!