25.4 C
Bengaluru
Friday, October 18, 2024

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

- Advertisement -
- Advertisement -

Sidlaghatta : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕವಾಗಿ ಮುಂದುವರೆದಲ್ಲಿ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಎಲ್ಲರೂ ಸರ್ಕಾರದ ಉದ್ಯೋಗವೇ ಮುಖ್ಯವೆಂಬ ಧೋರಣೆಯನ್ನು ಬಿಟ್ಟು ಸ್ವಾವಲಂಬಿ ಬದುಕು ನಡೆಸುವುದು ಅತ್ಯಗತ್ಯವಾಗಿದೆ ಎಂದು ಆರ್ಯವೈಶ್ಯ ಮಹಾಸಭೆಯ ನಿರ್ದೇಶಕ ಕೈವಾರ ಅಮರ್ ನಾಥ್ ಗುಪ್ತ ತಿಳಿಸಿದರು.

ನಗರದ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ಮತ್ತು ವಾಸವಿ ಯುವಜನ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಾಸವಿ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಣರಾಗಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಲು ಅನೇಕ ಅವಕಾಶಗಳನ್ನು ಆರ್ಯವೈಶ್ಯ ಮಹಾಸಭೆ ಒದಗಿಸುತ್ತಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಸ್ವಯಂ ಉದ್ಯೋಗ ತರಬೇತಿಯನ್ನು ನೀಡಿ ಸ್ವದೇಶ ಮತ್ತು ವಿದೇಶಗಳಲ್ಲಿ ಸಹ ಪ್ರತಿಭಾನ್ವಿತ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತಿದೆ. ಇದರ ಸದುಪಯೋಗ ಪಡೆದು ಸಮಾಜದ ಪ್ರಗತಿಗೆ ಕಾರಣಕರ್ತರಾಗಬೇಕೆಂದು ಹೇಳಿದರು.

ನಮ್ಮ ಸಮಾಜದ ಮುಖ್ಯ ವೃತ್ತಿಯಾದ ವ್ಯಾಪಾರ ವಹಿವಾಟು ಅತ್ಯಂತ ಕಷ್ಟಕರವಾಗಿದೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಸ್ಪರ್ಧೆ ಇದೆ. ಇದನ್ನು ಮನಗೊಂಡ ಆರ್ಯವೈಶ್ಯ ಮಹಾಸಭೆ ಸಮಾಜದ ಯುವಕರಿಗೆ ಅನೇಕ ಅವಕಾಶಗಳನ್ನು ಕಲ್ಪಿಸಿದೆ. ಶೈಕ್ಷಣಿಕವಾಗಿ ಮುಂದುವರೆಯಲು ಆರ್ಥಿಕ ಸಹಾಯ ಮಾಡುತ್ತದೆ. ಬಡ್ಡಿ ರಹಿತ ಸಾಲಯೋಜನೆ, ಸ್ವಯಂ ಉದ್ಯಮ ಸ್ಥಾಪಿಸಲು ಉಚಿತ ತರಬೇತಿಯನ್ನು ನೀಡುವ ಉದ್ಯೋಗ ಮಿತ್ರ ಹಾಗೂ ಸಮಾಜದ ದೊಡ್ಡ ಉದ್ಯಮಿಗಳು ಸಹಾಯದಿಂದ ಕಾರ್ಖಾನೆ ಗಳನ್ನು ಸ್ಥಾಪಿಸಲು ಆರ್ಥಿಕ ವ್ಯವಸ್ಥೆ ಸಹ ಮಾಡುತ್ತಿದೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುತ್ತದೆ. ಆರ್ಥಿಕ ವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುತ್ತದೆ. ಸಮಾಜದ ವಯೋವೃದ್ದರ ಪಿಂಚಣಿ, ವಿಧವಾವೇತನ, ಅಂಗವಿಕಲರಿಗೆ ಮಾಸಿಕವಾಗಿ ಪಿಂಚಣಿ ನೀಡುವ ಹಾಗೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಎಲ್ಲಾ ಸಮಾಜಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ದಾಬಸ್ ಪೇಟೆಯ ಬಳಿ ಹಲವು ಕೋಟಿರೂಗಳ ವೆಚ್ಚ ದಲ್ಲಿ ಬೃಹತ್ ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು ಸಂಪನ್ಮೂಲ ಕ್ರೂಡೀಕರಣ ಕಾರ್ಯಕ್ಕೆ ಸಮಾಜದ ಸ್ಥಿತಿವಂತರು ಉದಾರವಾಗಿ ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

2023-24 ನೆಯ ಸಾಲಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಾನಿಗಳಾದ ವಿಜಯಲಕ್ಷ್ಮಿ ಗೋಪಾಲ ಕೃಷ್ಣ, ಶೇಷಾನಂದ, ಮುರಳೀಧರನ್ ಹಾಗು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ವಾಸವಿ ದೇವಾಲಯದ ಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳಲಾಗಿತ್ತು. ಸಂಜೆ ವಿಶೇಷವಾಗಿ ಸಿಂಗರಿಸಲಾದ ಪಲ್ಲಕ್ಕಿ ಉತ್ಸವ ಮತ್ತು ಪಂಜಾಬಿ ಡೋಲ್ ಎಲ್ಲ ರ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ದೇವರನ್ನು ಮೆರವಣಿಗೆ ಮಾಡಲಾಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ, ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್, ಟಿ.ಎಸ್.ಕೆ ಬಾಬು, ಗಜಲಕ್ಷ್ಮಿ, ಸಂದೀಪ್ ರಾಜ್, ಶರತ್ ಬಾಬು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!