Home Sidlaghatta ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕಿತ್ತು ಪರಾರಿ

ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕಿತ್ತು ಪರಾರಿ

0
314

Sidlaghatta : ವಿಳಾಸ ಕೇಳುವ ನೆಪದಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದ ಘಟನೆ ಶಿಡ್ಲಘಟ್ಟ ನಗರದ ಹೂವಿನ ವೃತ್ತದಲ್ಲಿ ಭಾನುವಾರ ಮದ್ಯಾಹ್ನ ನಡೆದಿದೆ.

ಇಬ್ಬರು ಅಪರಿಚಿತ ಯುವಕರು ಸ್ಕೂಟಿ(ಡುಯೋ)ಯಲ್ಲಿ ಬಂದಿದ್ದು ಹೂವಿನ ವೃತ್ತದ ಬಳಿ ಔಷಧಿ ಅಂಗಡಿಯೊಂದರ ಬಳಿ ನಿಂತಿದ್ದ ಮಯೂರವೃತ್ತ ವಾಸಿ ಸುಬ್ಬಣ್ಣ(65) ಅವರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸ್ಕೂಟಿಯಲ್ಲಿ ಮುಂದೆ ಕುಳಿತು ಡ್ರೈವ್ ಮಾಡುತ್ತಿದ್ದ ಯುವಕ ಮಾತ್ರ ಹೆಲ್ಮೆಟ್ ಧರಿಸಿದ್ದ. ಚಿನ್ನದ ಸರ ಕಿತ್ತು ಪರಾರಿಯಾಗಿದ್ದನ್ನು ಕಂಡ ಅಲ್ಲಿನ ಕೆಲವರು ನೋಡಿ ಗಾಬರಿಯಿಂದ ಏಯ್ ಏಯ್ ಎಂದು ಜೋರಾಗಿ ಕೂಗಾಡಿದ್ದಾರೆ. ಅಷ್ಟರಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.

ಜೋರಾಗಿ ಏಯ್ ಎಂದು ಅರಚಿದ ಕೆಲವರ ಕಡೆ ಸ್ಕೂಟಿಯಲ್ಲಿ ಹಿಂದೆ ಕುಳಿತಿದ್ದವ ತುಟಿ ಹಲ್ಲು ಕಚ್ಚಿಕೊಂಡು ಹುಬ್ಬೇರಿಸಿ ಆವಾಜ್ ಹಾಕಿ ಎಚ್ಚರಿಕೆ ಕೊಡುವ ರೀತಿಯಲ್ಲಿ ತೋರು ಬೆರಳನ್ನು ತೋರಿದ್ದಾನೆ.

ಸುಬ್ಬಣ್ಣ ಅವರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಸುಮಾರು 1.22 ಲಕ್ಷ ರೂ.ಮೌಲ್ಯದ ಚಿನ್ನದ ಸರ ಅದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!