ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

- Advertisement -
- Advertisement -

Cheemangala, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ಲೀಜನ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ತರಬೇತುದಾರರಾದ ಬ್ರೈನ್ ಯೋಗಿ ಶ್ರೀನಿವಾಸ ಗುರೂಜಿ ಅವರಿಂದ ಟ್ರೈನ್ ಯುವರ್ ಬ್ರೈನ್, ಬ್ರೈನ್ ಅಂಡ್ ಮೈಂಡ್ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಚೀಮಂಗಲ ಹಾಗೂ ತುಮ್ಮನಹಳ್ಳಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆಯನ್ನು ಹೇಗೆ ಚುರುಕುಗೊಳಿಸಿಕೊಳ್ಳಬಹುದು, ಕಡಿಮೆ ಸಮಯದಲ್ಲಿ ಹೆಚ್ಚು ಜ್ಞಾನ ಸಂಪಾದಿಸುವುದು, ಹೆಚ್ಚು ಓದುವುದು ಮುಂತಾದ ಕುಶಲತೆಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಡಾ. ಎಂ. ಶಿವಕುಮಾರ್, ವಿಜಯಪುರ ಲೀಜನ್ ಅಧ್ಯಕ್ಷ ಕೆ. ವೆಂಕಟೇಶ್, ಕಾರ್ಯದರ್ಶಿ ಚಿದಾನಂದ ಮೂರ್ತಿ, ಮುಖ್ಯೋಪಾಧ್ಯಾಯ ಶಿವಶಂಕರ್, ಶಿಕ್ಷಕರಾದ ನವೀನ್, ಹೇಮಾವತಿ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!