Sidlaghatta: ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನಪರಿಷತ್ ಚುನಾವಣೆ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಮಾತನಾಡಿದರು.
ಪ್ರತಿಯೊಂದು ವರ್ಗದವರಿಗೂ ನ್ಯಾಯ ಒದಗಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿಯಾದ ಇತಿಹಾಸವಿದೆ, ಯಾರು ಅಲುಗಾಡಿಸಲಾಗುವುದಿಲ್ಲ. ಅಖಂಡ ಕೋಲಾರ ಜಿಲ್ಲೆಗಳಲ್ಲಿ ನಮಗೆ ಬಹುಮತವಿದೆ. ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ನಿಶ್ಚಿತ. ಹಾಗೆಂದು ಮನೆಯಲ್ಲಿ ಕೂರದೆ, ಬೇಜವಾಬ್ದಾರಿತನ ಮಾಡದೆ ಎಲ್ಲಾರೂ ಅವಿರತ ಕೆಲಸ ಮಾಡಬೇಕು. ಆಗ ಗೆಲುವು ಸಾದ್ಯ ಎಂದರು. ನನಗೆ 72 ವರ್ಷ ಆಗ್ತಾ ಬಂತು, ನಾನೇನು ಎಂ.ಎಲ್.ಎ., ಮಂತ್ರಿ ಆಗಬೇಕಿಲ್ಲ. ದೇಶ ಚೆನ್ನಾಗಿರಬೇಕೆಂಬುದು ನಮ್ಮಾಸೆ ಎಂದು ಅವರು ತಿಳಿಸಿದರು.
ಮನುಷ್ಯ, ಮನುಷ್ಯರ ನಡುವೆ ದ್ವೇಷ ಹುಟ್ಟು ಹಾಕುವ ಕೆಲಸ ಪ್ರಧಾನಿ ಮೋದಿಯವರು ಮಾಡ್ತಾ ಇದ್ದಾರೆ. ಅಂಬೇಡ್ಕರ್ ರವರ ಸಂವಿಧಾನವನ್ನೇ ಬುಡು ಮೇಲು ಮಾಡುವಂತಹ ಈ ಬಿಜೆಪಿಯ ಕೇಂದ್ರ ಸರ್ಕಾರವನ್ನು ತೊಲಗಿಸಬೇಕೆಂದರು.
ಕಳೆದ ಬಾರಿ ಎಂ.ಎಲ್.ಸಿ.ಚುನಾವಣೆಯಲ್ಲಿ ಸ್ಪರ್ದಿಸಿ ಅನಿಲ್ ಕುಮಾರ್ ಸೋತಿದ್ದು ದುರದೃಷ್ಟಕರ. ಈ ಬಾರಿ ಅವರಿಗೆ ಮತ ಚಲಾಯಿಸಿ ಬಹುಮತದಿಂದ ಗೆಲ್ಲಿಸಬೇಕೆಂದರು ಮನವಿ ಮಾಡಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ನಮ್ಮ ನಮ್ಮಲ್ಲಿ ಗೊಂದಲಗಳಿವೆಯೆಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡದೆ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ರವರಿಗೆ ಮತ ಹಾಕಬೇಕೆಂದರು. ಅವರು ವಿದ್ಯಾವಂತರು, ಸರಳ ಜೀವಿ, ಎಲ್ಲಾ ವರ್ಗದವರನ್ನು ಸರಿದೂಗಿಸಿಕೊಂಡು ಹೋಗುವಂತ ವ್ಯಕ್ತಿ ಎಂದರು.
ಎಂ.ಎಲ್.ಸಿ. ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ, ಮುಂದಿನ ವಿದಾನಸಭೆ ಚುನಾವಣೆಗೆ ಈ ಸ್ಥಳೀಯ ಚುನಾವಣೆ ದಿಕ್ಸೂಚಿ. ಆದ್ದರಿಂದ ಎಲ್ಲರೂ ನನಗೆ ಮತ ಚಲಾಯಿಸಿ ಎಂದು ಕೋರಿದರು. ವಿದಾನಪರಿಷತ್ ಸಭೆಯಲ್ಲಿ ನಮ್ಮೆರಡು ಜಿಲ್ಲೆಗಳ ಸಮಸ್ಯೆಗಳನ್ನು ಚರ್ಚಿಸಿ ನ್ಯಾಯ ಒದಗಿಸುವೆ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆಯಿಲ್ಲ ವಿರೋಧ ಪಕ್ಷಗಳ ಅಪ ಪ್ರಚಾರಕ್ಕೆ ಯಾರು ಗೊಂದಲಕ್ಕೀಡಾಗಬೇಡಿ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಶಾಸಕ ಶಿವಶಂಕರರೆಡ್ಡಿ, ಮಾಜಿ.ಎಂ.ಎಲ್.ಸಿ.ನಸೀರ್ ಅಹಮದ್ ಮಾತನಾಡಿದರು. ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಡಿ.ಸಿ.ಸಿ.ಬ್ಯಾಂಕ್ ಉಪಾದ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷ ವಿ.ಸುಭ್ರಮಣಿ, ಮಾಜಿ ಸದಸ್ಯ ಎನ್.ಮುನಿಯಪ್ಪ, ಹಾಪ್ ಕಾಮ್ಸ್ ನಿರ್ದೇಶಕ ಚಂದ್ರೇಗೌಡ, ಬೆಳ್ಳೂಟಿ ಸಂತೋಷ್ ಹಾಜರಿದ್ದರು.