25 C
Bengaluru
Wednesday, December 4, 2024

ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬನ ಕರ್ತವ್ಯ

- Advertisement -
- Advertisement -

Sidlaghatta : “ಸಮಾಜದ ಕೊನೆಯ ವ್ಯಕ್ತಿಗೂ ಮೂಲಭೂತ ಸವಲತ್ತುಗಳು ಸಿಗಬೇಕೆಂಬ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯದೊಂದಿಗೆ ರಚಿಸಲಾದ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು,” ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಧಿಕೃತವಾಗಿ ಅಂಗೀಕರಿಸಲಾಯಿತು, ಆದರೆ 1950ರ ಜನವರಿ 26ರಿಂದ ಪೂರ್ಣ ಜಾರಿಗೆ ಬಂದಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ legislature, executive, judiciary ಅಂಶಗಳನ್ನು ಸಂವಿಧಾನವೇ ಮುನ್ನಡೆಸುತ್ತದೆ. ಸಂವಿಧಾನದಲ್ಲಿ ನಮಗೆ ದೊರೆತ ಹಕ್ಕುಗಳಷ್ಟೇ ಮುಖ್ಯವಲ್ಲ, ಕರ್ತವ್ಯಗಳಿಗೂ ಸಮಪ್ರಾಮುಖ್ಯತೆ ಇದೆ. ಹಕ್ಕುಗಳನ್ನು ಉಪಯೋಗಿಸುವಲ್ಲಿ ಕರ್ತವ್ಯಗಳನ್ನು ಮರೆಯದಿರಬೇಕು,” ಎಂದರು.

ತಾವು ಮಾತನಾಡಿದ ಸಂದರ್ಭದಲ್ಲಿ, ಅವರು ಯುವಜನತೆ ಬಗ್ಗೆ ಗಮನ ಹರಿಸಿ, “ಶಿಕ್ಷಣವು ಕೇವಲ ಉದ್ಯೋಗ ಪಡೆಯಲು ಮಾತ್ರವಲ್ಲ, ಉತ್ತಮ ಪ್ರಜೆಗಳನ್ನು ರೂಪಿಸಲು ಸಹ ಉಪಯುಕ್ತವಾಗಿದೆ. ಇಂದಿನ ಯುವಕರು ಮುಂದಿನ ಪೀಳಿಗೆಯ ನಿರ್ಮಾಣಕರ್ತರು. ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆದಾಗ ಮಾತ್ರ ಸಮಾಜದ ಶ್ರೇಯಸ್ಸು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆ ಭೋದಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಮುರಳಿಆನಂದ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ವೆಂಕಟಶಿವಾರೆಡ್ಡಿ, ಪ್ರಾಧ್ಯಾಪಕರಾದ ಡಾ.ಷಫಿ ಅಹಮ್ಮದ್, ಆದಿನಾರಾಯಣಪ್ಪ, ಮತ್ತಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!