Home Sidlaghatta ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರು, ವಕೀಲರು, ಸಿಬ್ಬಂದಿಗಾಗಿ ಕ್ಯಾಂಟೀನ್ ಆರಂಭ

ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರು, ವಕೀಲರು, ಸಿಬ್ಬಂದಿಗಾಗಿ ಕ್ಯಾಂಟೀನ್ ಆರಂಭ

0
221

Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್‌ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನ್ಯಾಯಾಲಯದ ಕಕ್ಷಿದಾರರು, ವಕೀಲರು ಹಾಗೂ ಸಿಬ್ಬಂದಿಯ ಹಿತ ದೃಷ್ಟಿಯಿಂದ ಕ್ಯಾಂಟೀನ್ ಆರಂಭಿಸಲಾಗಿದೆ.

ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರು ಕ್ಯಾಂಟೀನ್‌ಗೆ ಚಾಲನೆ ನೀಡಿ ಇಲ್ಲಿ ಉತ್ತಮ ಗುಣಮಟ್ಟದ ತಿಂಡಿ ಊಟವನ್ನು ವಿತರಿಸಬೇಕು. ಮುಖ್ಯವಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದು ಕ್ಯಾಂಟೀನ್ ನಿರ್ವಹಣೆ ಮಾಡುವವರಿಗೆ ಸೂಚಿಸಿದರು.

ಕ್ಯಾಂಟೀನ್‌ ನಲ್ಲಿ ಸಿಗುವ ಕುಡಿಯುವ ನೀರು, ಸ್ವಚ್ಚತೆ ನಿರ್ವಹಣೆ, ಶೌಚಾಲಯ ಇನ್ನಿತರೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲರಾದ ಎಂ.ಪಾಪಿರೆಡ್ಡಿ, ಬೂದಾಳ ವಿಶ್ವನಾಥ್, ಎಚ್.ಎನ್.ಕಷ್ಣಮೂರ್ತಿ, ಮೇಲೂರು ರಘು, ಬಸವನಪರ್ತಿ ವೆಂಕಟೇಶ್, ವೇಣುಗೋಪಾಲ್, ನಾಗರಾಜ್, ಲಕ್ಷ್ಮಿ, ಷಹಾಬುದ್ದೀನ್ ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!