Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ರೈತ ದೇವರಾಜ್ ಅವರ ಮಗ ಡಿ.ಕಿಶನ್ (D Kishan) ಜಂಟಿ ಪ್ರವೇಶ ಪರೀಕ್ಷೆ(JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 1291 (OBC NCL Rank), 6364 (CRL Rank) ಪಡೆಯುವ ಮೂಲಕ ತಾಲ್ಲೂಕಿನಲ್ಲಿ IIT ಗೆ ಆಯ್ಕೆಯಾದ ಮೊದಲಿಗನಾಗಿದ್ದಾನೆ.
ರಾಷ್ಟ್ರಮಟ್ಟದಲ್ಲಿ ಎರಡು ಪತ್ರಿಕೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 12,31,874 ಮಂದಿ ನೋಂದಾಯಿಸಿದ್ದರು.
ಇದರಲ್ಲಿ 40,284 ಮಂದಿ ಗಂಡು ಮಕ್ಕಳು ಮತ್ತು 7,964 ಮಂದಿ ಹೆಣ್ಣುಮಕ್ಕಳು IIT ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ದೇಶದ ಎಲ್ಲಾ ಪ್ರತಿಷ್ಠಿತ IIT ಕಾಲೇಜುಗಳಲ್ಲಿರುವುದು ಒಟ್ಟಾರೆ 17,740 ಸೀಟುಗಳಾಗಿವೆ.
ರಾಜ್ಯದ CET ಪರೀಕ್ಷೆಯಲ್ಲಿಯೂ ಡಿ.ಕಿಶನ್ 911 ರ್ಯಾಂಕ್ ಪಡೆದಿದ್ದಾನೆ.