Home Sidlaghatta ದಿಬ್ಬೂರಹಳ್ಳಿ ಪೊಲೀಸರ ಕಾರ್ಯಾಚರಣೆ, ಇಬ್ಬರು ಅಂತರಾಜ್ಯ ವಂಚಕರ ಬಂಧನ

ದಿಬ್ಬೂರಹಳ್ಳಿ ಪೊಲೀಸರ ಕಾರ್ಯಾಚರಣೆ, ಇಬ್ಬರು ಅಂತರಾಜ್ಯ ವಂಚಕರ ಬಂಧನ

0
286

Dibburahalli, Sidlaghatta : ರೈತರಿಂದ ಟ್ರ್ಯಾಕ್ಟರ್ ಇಂಜಿನ್‌ ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಲೀಜ್‌ ಗೆ ಪಡೆದು ನಂತರ ಇಂಜಿನ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ವಂಚಕರ ತಂಡವನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿ ಅವರಿಂದ ಸುಮಾರು ಒಂದು ಕೋಟಿ ರೂ.ಬೆಲೆ ಬಾಳುವ 9 ಟ್ರ್ಯಾಕ್ಟರ್ ಇಂಜಿನ್‌ ಗಳನ್ನು ವಶಕ್ಕೆ ಪಡೆದಿದ್ದಾರೆ.

ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮದ ವಾಸಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಜಯಚಂದ್ರರೆಡ್ಡಿ(43), ಆಂಧ್ರದ ನಂದ್ಯಾಲ ಮಂಡಲದ ಶ್ರೀನಿವಾಸಪುರದ ಡ್ರೈವರ್ ವೃತ್ತಿಯ ತಲಾರಿ ರಾಮಲಿಂಗೇಶ್ವರರಾವ್(39) ಇಬ್ಬರನ್ನು ಬಂಸಿದ್ದಾರೆ. ಇವರಿಂದ ವಿವಿಧ ಕಂಪನಿಗಳ ಸುಮಾರು 97 ಲಕ್ಷ ಮೌಲ್ಯದ 9 ಟ್ರ್ಯಾಕ್ಟರ್ ಇಂಜಿನ್‌ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಅಂತರರಾಜ್ಯ ವಂಚಕರ ತಂಡದ ಇನ್ನಿತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ದಿಬ್ಬೂರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.

ಈ ವಂಚಕರ ತಂಡವು ಟ್ರ್ಯಾಕ್ಟರ್ ಇಟ್ಟುಕೊಂಡಿರುವ ರೈತರನ್ನು ಸಂಪರ್ಕಿಸಿ ಟ್ರ್ಯಾಕ್ಟರ್ ಇಂಜಿನ್‌ ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಲೀಸ್‌ ಗೆ ಪಡೆಯುತ್ತಾರೆ. ಒಂದೊಮ್ಮೆ ಟ್ರ್ಯಾಕ್ಟರ್ ಮೇಲೆ ಬ್ಯಾಂಕ್ ಸಾಲ ಇದ್ದರೆ ಅದರ ಕಂತುಗಳನ್ನು ನಾವೇ ಕಟ್ಟಿಕೊಂಡು ಇನ್ನುಳಿದಂತೆ ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುತ್ತೇವೆಂದು ನಂಬಿಸಿ ಇಂಜಿನ್‌ ನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ.
ಒಂದೆರಡು ತಿಂಗಳು ಮಾಸಿಕ ಕಂತನ್ನು ಕೊಟ್ಟು ವಿಶ್ವಾಸಗಳಿಸಿ ಅಕ್ಕ ಪಕ್ಕದ ಇನ್ನಿತರೆ ರೈತರಿಂದಲೂ ಇದೇ ರೀತಿ ಇಂಜಿನ್‌ ಗಳನ್ನು ಪಡೆದುಕೊಂಡು ನಂತರ ಇಂಜಿನ್‌ ಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದರು.

ತಾಲ್ಲೂಕಿನ ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್(33) ತನ್ನ ಟ್ರ್ಯಾಕ್ಟರ್ ಇಂಜಿನ್‌ ನನ್ನು ಬಾಡಿಗೆ ಆಧಾರದಲ್ಲಿ ಲೀಸ್‌ ಗೆ ಪಡೆದು ಬಾಡಿಗೆ ಹಣ ಕೊಡದೆ ಇಂಜಿನನ್ನು ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂದು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದಾಗಲೆ ವಂಚಕರ ಬಣ್ಣ ಬಯಲಾಗಿದೆ.

ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್ ದೂರನ್ನು ದಾಖಲಿಸಿಕೊಂಡ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಬಂಧಿಸಿ ಅವರಿಂದ ಟ್ರ್ಯಾಕ್ಟರ್ ಇಂಜಿನ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್‌.ಐ ಶ್ಯಾಮಲ, ಎಂ.ನಾಗರಾಜ್, ಸಿಬ್ಬಂದಿ ನರಸಿಂಹಯ್ಯ, ನಂದಕುಮಾರ್, ಮುರಳಿಕೃಷ್ಣ, ಕೃಷ್ಣಪ್ಪ, ಚಂದ್ರಶೇಖರ್ ಭಾಗವಹಿಸಿದ್ದು ಅವರನ್ನು ಎಸ್ಪಿ ಡಿ.ಎಲ್.ನಾಗೇಶ್ ಅಭಿನಂದಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!