ಹಾಳುಬಾವಿಯಲ್ಲಿ ಬಿದ್ದಿದ್ದ ನಾಯಿಗಳ ರಕ್ಷಣೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಹೊರವಲಯದ ಇದ್ಲೂಡು ಬಳಿಯ ತೋಟಗಳಲ್ಲಿನ ಹಾಳುಬಾವಿಯಲ್ಲಿ ಬಿದ್ದಿದ್ದ ಎರಡು ನಾಯಿಗಳನ್ನು ಅಗ್ನಿಶಾಮಕದಳದವರು ಮಂಗಳವಾರ ರಕ್ಷಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಬಾವಿಯಲ್ಲಿ ಬಿದ್ದಿದ್ದ ನಾಯಿಗಳನ್ನು ಯಾರೂ ಗಮನಿಸಿಕೊಂಡಿರಲಿಲ್ಲ. ಅದರ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಅಗ್ನಿಶಾಮಕದಳದವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಗ್ಗವನ್ನು ಬಿಟ್ಟು ಇಳಿದು, ನಾಯಿಗಳಿಗೆ ಹಗ್ಗ ಕಟ್ಟಿ ಮೇಲಕ್ಕೆಳೆದಿದ್ದಾರೆ.

ಅಗ್ನಿಶಾಮಕದಳದ ಗಂಗಾಧರ್, ಕದಿರಪ್ಪ, ಅಶೋಕ್, ಮಂಜುನಾಥ್, ಸಂದೀಪ, ರಕ್ಷಿತ್, ಹರೀಶ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!