
Sidlaghatta : ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ಬಣ್ಣಗಳ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಪರಸ್ಪರ ಬಣ್ಣ ಎರಚಿಕೊಂಡು, ಕುಣಿದು ಕುಪ್ಪಳಿಸಿ ಜನತೆ ಉತ್ಸಾಹಭರಿತವಾಗಿ ಹಬ್ಬವನ್ನು ಸಂಜರಿಸಿದರು.
ನಗರದ ಹೂವಿನ ವೃತ್ತದಲ್ಲಿರುವ ಶ್ರೀನಗರೇಶ್ವರ ದೇವಾಲಯದ ಆವರಣದಲ್ಲಿ ಕಾಮಣ್ಣ ಮತ್ತು ರತಿಯ ಮಣ್ಣಿನ ಪ್ರತಿಮೆಯನ್ನು ನಿರ್ಮಿಸಿ, ಯುವಕ-ಯುವತಿಯರು ಹಾಗೂ ಪುಟಾಣಿ ಮಕ್ಕಳು ವೈವಿಧ್ಯಮಯ ವೇಷಭೂಷಣಗಳನ್ನು ಧರಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಪುಟಾಣಿ ಮಕ್ಕಳು ತಂಬಿಟ್ಟಿನ ದೀಪದ ಆರತಿ ಬೆಳಗಿ, “ಕಾಮಣ್ಣನ ಅಂತ್ಯವಾಯಿತು” ಎಂದು ಕೂಗಿ ಸಂಭ್ರಮಿಸಿದರು.
ಅಯೋಧ್ಯನಗರದ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ, ಯುವಕ ಮಂಡಳಿ, ಮಹಿಳಾ ಮಂಡಳಿ ಈ ಬಾರಿ ಕಾಮಣ್ಣ ಹಬ್ಬವನ್ನು ಎರಡು ದಿನಗಳ ಕಾಲ ಸಂಪ್ರದಾಯಬದ್ಧವಾಗಿ ಆಚರಿಸಿದರು.