Home Sidlaghatta ಇದ್ಲೂಡು ಡೇರಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಇದ್ಲೂಡು ಡೇರಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

0
254

Idloodu, Sidlaghatta : ಇದ್ಲೂಡು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎ.ಮುನಿಶಾಮಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಜನಾರ್ಧನ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎ.ಮುನಿಶಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಜನಾರ್ಧನ್ ಅವರು ಮಾತ್ರವೇ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದ ಕಾರಣ ಅವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಕಾರಿಗಳು ಘೋಷಿಸಿದರು.

ಶಂಷದ್ ತಬ್ರೇಜ್ ಅವರು ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು. ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಎಲ್ಲ ನಿರ್ದೇಶಕರು, ಮುಖಂಡರು, ಹಾಲು ಉತ್ಪಾದಕರು ಅಭಿನಂದಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.

ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸುಶೀಲಮುನಿಶಾಮಿ, ನಿರ್ದೇಶಕರಾದ ನರಸಿಂಹಪ್ಪ, ಕೆಂಪಮ್ಮ, ಸುಶೀಲಮ್ಮ, ಎಂ.ಪಾಪಣ್ಣ, ಮುನಿಪಾಪಣ್ಣ, ಮುನಿಶಾಮಿ, ಚನ್ನರಾಯಪ್ಪ, ಮುಖಂಡರಾದ ಬೈರೇಗೌಡ, ಡಿ.ವಿ.ಮುನಿಶಾಮಿ, ಸಿ.ಕೆ.ಮುನಿಕೃಷ್ಣಪ್ಪ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!