Home Sidlaghatta ಇ-ಖಾತಾ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ನಗರಸಭೆಯ ಮನವಿ

ಇ-ಖಾತಾ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ನಗರಸಭೆಯ ಮನವಿ

0
183

Sidlaghatta : ಮದ್ದಿನ ತಿಂಗಳು ಮೇ 10 ರಂದು ಇ-ಖಾತಾ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನಾಗರಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಇ-ಖಾತಾ ಪಡೆಯುವಂತೆ ಪೌರಾಯುಕ್ತ ಮೋಹನ್ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ.

ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಂಕೇತಿಕವಾಗಿ ಇ-ಖಾತಾ ದಾಖಲೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಆಯುಕ್ತರು, ನಗರ ವ್ಯಾಪ್ತಿಯಲ್ಲಿ ಸುಮಾರು 12,000 ಆಸ್ತಿಗಳಿದ್ದು, ಇದರಲ್ಲಿ 5,000 ಆಸ್ತಿಗಳು ಮಾತ್ರ ನೋಂದಣಿಯಾಗಿವೆ ಎಂದರು.

ಇದುವರೆಗೆ 5230 ಅರ್ಜಿಗಳನ್ನು ಜನರು ಪಡೆದುಕೊಂಡಿದ್ದು, 2295 ಅರ್ಜಿಗಳು ಮಾತ್ರ ದಾಖಲೆಗಳೊಂದಿಗೆ ಕಚೇರಿಗೆ ತಲುಪಿವೆ. ಇವುಗಳಲ್ಲಿ 500 ಅರ್ಜಿಗಳು ಪರಿಶೀಲನೆ ಬಳಿಕ ಅನುಮೋದನೆಯ ಹಂತದಲ್ಲಿವೆ. ಈ ಪೈಕಿ 100 ಮಂದಿಗೆ ಇ-ಖಾತಾ ಸಾಂಕೇತಿಕವಾಗಿ ವಿತರಿಸಲಾಗಿದೆ.

ಬಾಕಿ ಅರ್ಜಿಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಿ ಇ-ಖಾತಾ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಸಭೆಯಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!