ನಿಷೇದಿತ ಪ್ಲಾಸ್ಟಿಕ್ ವಶ

- Advertisement -
- Advertisement -

Sidlaghatta : ನಗರಸಭೆ ವತಿಯಿಂದ ನಗರದ ವಿವಿಧ ಅಂಗಡಿ ಮತ್ತು ಹೋಟೆಲ್ ಗಳ ಮೇಲೆ ಮಂಗಳವಾರ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮತ್ತು ಬಳಕೆ ಮಾಡುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರು.

ನಗರದ ಬಸ್ ನಿಲ್ದಾಣ ಬಳಿಯಿರುವ ಹಲವಾರು ಅಂಗಡಿ, ಹೋಟೆಲ್ ಇನ್ನಿತರ ಕಡೆ ನಿಷೇಧಿತ ಪ್ಲಾಸ್ಟಿಕ್ ಕವರ್ ಮಾರಾಟ ಹಾಗು ಬಳಕೆ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳ ತಂಡ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಮಾರಾಟಗಾರರಿಗೆ ದಂಡ ವಿಧಿಸಿದರು.

ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಮುಕ್ತಾಂಭ ಮಾತನಾಡಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗು ಬಳಕೆ ಮಾಡದಂತೆ ಅಂಗಡಿಗಳ ಮಾಲೀಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಸರಿಯಲ್ಲ. ಇದೀಗ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಕಂಡು ಬಂದಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಜರಗಿಸಲಾಗುವುದು ಎಂದರು.

ನಗರಸಭೆ ಪ್ರಭಾರಿ ಆರೋಗ್ಯ ನಿರೀಕ್ಷಕರಾದ ಮುರಳಿ, ರಾಜೇಶ್, ಕಿರಿಯ ಅಭಿಯಂತರ ಚಕ್ರಪಾಣಿ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!