Sidlaghatta : ಶಿಡ್ಲಘಟ್ಟ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಬ್ಯಾಂಕಿನ ಆವರಣದಲ್ಲಿ ಸೆ 23 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಸಿ.ಎನ್.ಕೃಷ್ಣನ್ ತಿಳಿಸಿದ್ದಾರೆ.
ಅಂಚೆ ಇಲಾಖೆಯ ಮೂಲಕ ಈಗಾಗಲೇ 5968 ಷೇರುದಾರರಿಗೆ ವಾರ್ಷಿಕ ಮಹಾಸಭೆಯ ಕುರಿತು ಮಾಹಿತಿಯನ್ನು ನೀಡಲಾಗಿದೆ.
ವಾರ್ಷಿಕ ಮಹಾಸಭೆಯಲ್ಲಿ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ನಿರ್ದೇಶಕ ಯಲವಾರ್ ಸೊಣ್ಣೇಗೌಡ ಭಾಗವಹಿಸಲಿದ್ದು ಸಭೆಯಲ್ಲಿ ಹಿಂದಿನ ಮಹಾಸಭೆಯ ನಡವಳಿಕೆಯನ್ನು ಓದಿ ದಾಖಲಿಸುವುದು, 2021-22ನೇ ಸಾಲಿನ ಸರ್ವ ಸದಸ್ಯರ ಸಭೆಯ ನಡವಳಿಕೆಯನ್ನು ಓದಿ ರೆಕಾರ್ಡ್ ಮಾಡುವುದು, 2022-23 ನೇ ಸಾಲಿನ ಆಡಿಟ್ ವರದಿ ಜಮಾ ಖರ್ಚು ಲಾಭ ನಷ್ಟ ಆಸ್ತಿ ಜವಾಬ್ದಾರಿ ತಃಖ್ತೆ ಮತ್ತು ಅನುಪಾಲನಾ ವರದಿಯನ್ನು ಅಂಗೀಕರಿಸುವ ವಿಚಾರದಲ್ಲಿ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ 2022-23ನೇ ಸಾಲಿನ ಮಂಜೂರಾದ ಬಜೆಟ್ ಗಿಂತ ಹೆಚ್ಚು ಕಡಿಮೆ ಖರ್ಚಾಗಿರುವ ಮೊತ್ತವನ್ನು ಅಂಗೀಕರಿಸುವುದು ಹಾಗೂ 2023-24 ನೇ ಸಾಲಿನ ಅಂದಾಜು ಬಜೆಟ್ ಮಂಜೂರಾತಿ ಪಡೆಯುವುದು ಹಾಗೂ 2023-24ನೇ ಸಾಲಿನ ಲೆಕ್ಕಪರಿಶೋಧನೆ ಮಾಡಲು ಸನ್ನದು ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ರೈತರು ಮತ್ತು ಷೇರುದಾರರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.