Saturday, December 2, 2023
HomeSidlaghattaಕನ್ನಮಂಗಲ ಚಿಕ್ಕ ಆಂಜಿನಪ್ಪ ಕೊಲೆಯ ಆರೋಪಿ ಬಂಧನ

ಕನ್ನಮಂಗಲ ಚಿಕ್ಕ ಆಂಜಿನಪ್ಪ ಕೊಲೆಯ ಆರೋಪಿ ಬಂಧನ

- Advertisement -
- Advertisement -
- Advertisement -
- Advertisement -

Sidlaghatta : ಜೂನ್ 2 ರ ರಾತ್ರಿ ಕನ್ನಮಂಗಲ (Kannamangala) ಗ್ರಾಮದ ಚಿಕ್ಕ ಆಂಜಿನಪ್ಪ (38) ಅವರನ್ನು ಕೊಲೆ (Murder) ಮಾಡಿದ್ದ ಆರೋಪಿ ವೆಂಕಟೇಶ್ ನನ್ನು ಬಂಧಿಸಿರುವುದಾಗಿ (Arrest) ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (G K Mithun Kumar) ತಿಳಿಸಿದರು.

ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಿಕ್ಕ ಆಂಜಿನಪ್ಪ ಶಿಡ್ಲಘಟ್ಟ ದಿಂದ ತನ್ನ ಸ್ವಗ್ರಾಮ ಕನ್ನಮಂಗಲಕ್ಕೆ ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ನಾರಾಯಣದಾಸರಹಳ್ಳಿಯ ಗೇಟ್ ನಲ್ಲಿ ಹೊಡೆದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೊಲೆಯಾಗಿರುವ ಚಿಕ್ಕ ಆಂಜಿನಪ್ಪ ರವರ ಮೊಬೈಲ್ ನಂಬರ್ ಕರೆಗಳ ಜಾಡನ್ನು ಹಿಡಿದು ತನಿಖೆ ಕೈಗೊಂಡಿದ್ದು, ಕೊಲೆಯಾದ ರಾತ್ರಿ ಮೃತನ ನಂಬರ್ ಗೆ ಅನುಮಾನಸ್ಪದವಾಗಿ ಕನ್ನಮಂಗಲ ಗ್ರಾಮದ ವೆಂಕಟೇಶ್ ಬಿನ್ ಲಕ್ಷ್ಮಯ್ಯ ಎಂಬುವವರು ಹಲವು ಬಾರಿ ಕರೆಮಾಡಿದ್ದರು. ಆತನನ್ನು ಜೂನ್ 14 ರಂದು ಸಂಜೆ 5 ಗಂಟೆಗೆ ಕನ್ನಮಂಗಲ ಗ್ರಾಮ ಆತನ ಮನೆಯಲ್ಲಿ ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರ ಮಾಡಲಾಯಿತು.

“ತನ್ನ ಅಣ್ಣ ನಾಗೇಶ್ ರವರ ಜೊತೆ ಚಿಕ್ಕ ಆಂಜಿನಪ್ಪ ಸೇರಿಕೊಂಡು ನನಗೆ ಸೇರಬೇಕಾದ ಜಮೀನಿನನ್ನು ಅಣ್ಣ ನಾಗೇಶ್ ರವರ ಹೆಸರಿಗೆ ಮಾಡಿಸುತ್ತಾನೆಂದು ತಿಳಿದುಕೊಂಡು ಇವನು ಬದಿಕಿದ್ದರೇ ತನಗೆ ಜಮೀನು ಇಲ್ಲದಂತೆ ಮಾಡುತ್ತಾನೆಂದು ಯೋಚಿಸಿ ಇವನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂತ ಅವನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆ. ಅದರಂತೆ ಜೂನ್ 2 ರಂದು ರಾತ್ರಿ ಸುಮಾರು ರಾತ್ರಿ 9 ಗಂಟೆಯಲ್ಲಿ, ತಾನು ಚಿಕ್ಕ ಆಂಜಿನಪ್ಪ ರವರ ಮೊಬೈಲ್ ಗೆ ಪೋನ್ ಮಾಡಿ, ಆತ ಎಲ್ಲಿದ್ದಾನೆಂಬುದನ್ನು ತಿಳಿದುಕೊಂಡು ನಾರಾಯ ದಾಸರಹಳ್ಳಿ ಗೇಟ್ ಬಿಟ್ಟು ಆಂಜಿನೇಯ ಸ್ವಾಮಿ ದೇವಾಲಯದಿಂದ ಸ್ವಲ್ಪ ಮುಂದೆ ಚಿಕ್ಕ ಆಂಜಿನಪ್ಪ ಊರಿಗೆ ಹೋಗುತ್ತಿದ್ದಾಗ ಚಿಕ್ಕ ಆಂಜಿನಪ್ಪ ಅರನ್ನು ಕೂಗಿದೆ. ಆತ ದ್ವಿಚಕ್ರವಾಹನವನ್ನು ನಿಲ್ಲಿಸಿದಾಗ ನನ್ನ ಬಳಿ ಕೊಲೆ ಮಾಡಲು ತಯಾರಿಸಿಟ್ಟುಕೊಂಡಿದ್ದ ನೀಲಗಿರಿ ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದೆ. ಆತನ ತಲೆ ಬುರುಡೆಗೆ, ಎಡಭಾಗದ ಕಿವಿಯ ಬಳಿ, ಬಲಕೈಗೆ, ಬೆನ್ನಿಗೆ ಹೊಡೆದೆ. ತೀವ್ರ ರಕ್ತ ಬಂದು ಅಲ್ಲಿಯೇ ಬಿದ್ದು ಮೃತಪಟ್ಟಿರುತ್ತಾನೆ. ತಾನು ದೊಣ್ಣೆಯ ಸಮೇತ ದ್ವಿಚಕ್ರವಾಹನದಲ್ಲಿ ಹೊರಟುಹೋದೆ” ಎಂದು ತಪ್ಪನ್ನು ಒಪ್ಪಿಕೊಂಡಿರುತ್ತಾನೆ ಎಂದು ವಿವರಣೆ ನೀಡಿದರು.

ಎ.ಎಸ್.ಪಿ. ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಈ ಪತ್ತೆ ಕಾರ್ಯದ ತಂಡದ ನೇತೃತ್ವ ವಹಿಸಿದ್ದ ಪ್ರಕರಣದ ತನಿಖಾಧಿಕಾರಿ ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ, ಗ್ರಾಮಾಂತರ ಪಿ.ಎಸ್.ಐ ಸತೀಶ್, ಪ್ರೋ.ಪಿ.ಸ್.ಐ ಸೌಜನ್ಯ ಮತ್ತು ಸಿಬ್ಬಂದಿ ನಂದಕುಮಾರ್, ಸುನಿಲ್ ಕುಮಾರ್, ಅಮರನಾಥ, ಕೃಷ್ಣಪ್ಪ ಹಾಗೂ ಜೀಪ್ ಚಾಲಕ ಎ.ಚ್.ಸಿ ನಾಗೇಶ ರವರ ಕಾರ್ಯ ಶ್ಲಾಘನೀಯ ಎಂದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES
- Advertisment -

Most Popular

error: Content is protected !!