21.8 C
Bengaluru
Thursday, December 12, 2024

ರಾಮಲಿಂಗೇಶ್ವರ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ರೂಗಳ ನೆರವು

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗೇಶ್ವರ ದೇವಸ್ಥಾನದ (Ramalingeshwara Temple) ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ರೂಗಳ ಚೆಕ್ ಅನ್ನು ದುರ್ಗಂ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಾಲಬೈರೇಶ್ವರಸ್ವಾಮಿ ಟ್ರಸ್ಟ್ ಗೆ ನೀಡಿ ಅವರು ಮಾತನಾಡಿದರು.

ರಾಮಲಿಂಗೇಶ್ವರ ಬೆಟ್ಟ, ದೇವಸ್ಥಾನ ಸೇರಿದಂತೆ ಈ ಪ್ರದೇಶವೆಲ್ಲ ಅತ್ಯಂತ ಪವಿತ್ರ, ಪೂಜನೀಯ ಮತ್ತು ಪ್ರೇಕ್ಷಣೀಯ ಪ್ರವಾಸಿ ತಾಣವಾಗಿರುವುದರಿಂದ ಇದನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ ಎಂದು ದುರ್ಗಂ ಚಾರಿಟೆಬಲ್ ಟ್ರಸ್ಟ್ ಧರ್ಮದರ್ಶಿಗಳಾದ ನಾಗಪ್ರಕಾಶ್ ಬಾಬು ಮತ್ತು ರತ್ನ ದಂಪತಿ ತಿಳಿಸಿದರು.

ನಾವೀಗ ಅಮೆರಿಕೆಯಲ್ಲಿ ನೆಲೆಸಿದ್ದರೂ ನಮ್ಮ ಕುಟುಂಬದ ಬೇರುಗಳಿರುವುದು ಬಶೆಟ್ಟಹಳ್ಳಿ ಹೋಬಳಿಯಲ್ಲಿಯೇ. ಹಾಗಾಗಿ ನಮ್ಮ ಟ್ರಸ್ಟ್ ಮೂಲಕ ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ, ದೇವಸ್ಥಾನಗಳಿಗೆ ಸಾಧ್ಯವಾದಷ್ಟು ನೆರವಾಗುತ್ತಿರುತ್ತೇವೆ. ದೇವಸ್ಥಾನದ 75 ಲೈಟುಗಳು, 12 ಫ್ಯಾನುಗಳು ಹಾಗೂ ಬೀದಿ ದೀಪಗಳಿಗೆ ಆಗುವಷ್ಟು ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿಕೊಡಲಿದ್ದೇವೆ ಎಂದರು.

ರಾಮಲಿಂಗೇಶ್ವರ ದೇವಾಲಯದ ಕನ್ವೀನರ್ ಸುನೀತಾ ಶ್ರೀನಿವಾಸರೆಡ್ಡಿ, ಕಾಲಬೈರೇಶ್ವರಸ್ವಾಮಿ ಟ್ರಸ್ಟ್ ಅಧ್ಯಕ್ಷ ಬೈರಾರೆಡ್ಡಿ, ಉಪಾಧ್ಯಕ್ಷ ಡಿ.ಬಿ.ವೆಂಕಟೇಶ್, ಬಿ.ಎಸ್.ನಾಗರಾಜ್, ಬಿ.ವಿ.ನಾರಾಯಣಸ್ವಾಮಿ, ಅರ್ಚಕ ಗಿರೀಶ್ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -
error: Content is protected !!