17.7 C
Bengaluru
Wednesday, January 15, 2025

ರೈಲು ಹಳಿ ಮೇಲೆ ತಲೆಯಿಟ್ಟು ಮಲಗಿ ಆತ್ಮಹತ್ಯೆಗೆ ಶರಣಾದ ಅಕ್ಕ ತಮ್ಮ

- Advertisement -
- Advertisement -

Sidlaghatta : ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ರೈಲು ಹಳಿಯ ಮೇಲೆ ತಲೆ ಇಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಡ್ಲಘಟ್ಟದಲ್ಲಿ ಗುರುವಾರ ರಾತ್ರಿ ನಡೆದಿದೆ. ಶಿಡ್ಲಘಟ್ಟ ನಗರದ ಪ್ರೇಮನಗರ ವಾಸಿಗಳಾದ ನವ್ಯ ಅಲಿಯಾಸ್ ಶಿಲ್ಪ(24)ಮತ್ತು ಪ್ರಭು(22)ಆತ್ಮಹತ್ಯೆ ಮಾಡಿಕೊಂಡವರು.

ಶಿಡ್ಲಘಟ್ಟದ ಮಾರ್ಗವಾಗಿ ಬೆಂಗಳೂರಿನಿಂದ ಕೋಲಾರಕ್ಕೆ ತೆರಳುವ ರೈಲಿಗೆ ತಲೆಕೊಟ್ಟು ಅವರು ಮೃತಪಟ್ಟಿದ್ದಾರೆ. ಅಕ್ಕ ಮತ್ತು ತಮ್ಮನ ರುಂಡ ಮತ್ತು ಮುಂಡಗಳು ಬೇರ್ಪಟ್ಟ ದೃಶ್ಯ ಭಯಾನಕವಾಗಿತ್ತು.

ಇತ್ತೀಚೆಗೆ ನವ್ಯ ಮತ್ತು ಪ್ರಭು ಅವರ ತಾಯಿ ಲಲಿತಮ್ಮ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದರು. ತಮ್ಮ ತಾಯಿ ಲಲಿತಮ್ಮಳೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಈ ಇಬ್ಬರೂ ತಾಯಿಯ ಸಾವಿನ ನಂತರ ಹೆಚ್ಚು ವಿಚಲಿತರಾಗಿದ್ದರಂತೆ. ಪ್ರಭು ಮನೆಯ ಮೇಲಿಂದ ಬಿದ್ದು ಸಾಯುವ ವಿಫಲ ಪ್ರಯತ್ನವನ್ನೂ ನಡೆಸಿದ್ದನಂತೆ.

ಅಂತಿಮವಾಗಿ ಪ್ರಭು ಮತ್ತು ನವ್ಯ ಅಲಿಯಾಸ್ ಶಿಲ್ಪ ತಮ್ಮಿಬ್ಬರ ಕೈಗಳನ್ನು ದಾರದಿಂದ ಕಟ್ಟಿಕೊಂಡು ಶಿಡ್ಲಘಟ್ಟ ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿನ ಶೆಟ್ಟಪ್ಪನವರ ತೋಪಿನ ಪಕ್ಕ ಹಾದು ಹೋಗುವ ರೈಲು ಹಳಿ ಮೇಲೆ ತಲೆಯಿಟ್ಟು ಮಲಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುವಾರ ಮದ್ಯಾಹ್ನ ಈ ಇಬ್ಬರೂ ರೈಲು ಹಳಿ ಬಳಿ ಅಡ್ಡಾಡುವುದನ್ನು ಸ್ಥಳೀಯರು ಕಂಡಿದ್ದಾರೆ. ಅವರ ಮನೆಯೂ ಸಮೀಪದಲ್ಲೆ ಇರುವ ಕಾರಣ ಯಾರಿಗೂ ಅನುಮಾನ ಬಂದಿಲ್ಲ. ಆದರೆ ನಂತರ ರಾತ್ರಿ ಊಟ ಮುಗಿಸಿಕೊಂಡು ಮನೆಯಿಂದ ಹೊರ ಬಂದಿರುವ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ ಸಾಕಷ್ಟು ಸಮಯವಾದರೂ ಮನೆಗೆ ಬಾರದ್ದರಿಂದ ಗಾಬರಿಯಾದ ಪ್ರಭು, ನವ್ಯ ಅವರ ತಂದೆ ನಟರಾಜ್ ಸುತ್ತ ಮುತ್ತ ಹುಡುಕಾಟ ನಡೆಸಿ ಮುರುಗಮಲ್ಲಕ್ಕೆ ಹೋಗಿರಬಹುದೆಂದು ಶಂಕಿಸಿ ಅಲ್ಲಿಗೆ ತೆರಳಿದ್ದರು.

ಲಲಿತಮ್ಮ ಅವರು ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಆಗಾಗ್ಗೆ ಮುರುಗಮಲ್ಲಗೆ ಹೋಗುತ್ತಿದ್ದರಂತೆ. ಆಕೆಯೊಂದಿಗೆ ಪ್ರಭು ಹಾಗೂ ಶಿಲ್ಪ ಕೂಡ ಸಾಕಷ್ಟು ದಿನಗಳ ಕಾಲ ಮುರುಗಮಲ್ಲದಲ್ಲೆ ಉಳಿದುಬಿಡುತ್ತಿದ್ದರು ಎಂದು ನೆರೆ ಹೊರೆಯವರು ಹೇಳುತ್ತಾರೆ.
ಲಲಿತಮ್ಮ ಮತ್ತು ನಟರಾಜ್ ಅವರಿಗೆ ಮೂವರು ಮಕ್ಕಳಿದ್ದು ಮೊದಲನೆ ಪುತ್ರ ನವೀನ್ ಮರಗೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದರೆ, ಪ್ರಭು ಮತ್ತು ನವ್ಯ ತನ್ನ ತಾಯಿಯೊಂದಿಗೆ ಮನೆಯಲ್ಲೆ ಇರುತ್ತಿದ್ದರು ಎಂದು ಹೇಳುತ್ತಾರೆ.

ಗುರುವಾರ ರಾತ್ರಿ ಘಟನೆ ನಡೆದಿದ್ದು ಮರುದಿನ ಬೆಳಗ್ಗೆ ಶವಗಳು ರೈಲು ಹಳಿ ಮೇಲೆ ಕಾಣಿಸಿಕೊಂಡಿವೆ. ಶಿಡ್ಲಘಟ್ಟ ನಗರ ಠಾಣೆ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!