ದೇವಾಲಯಗಳಲ್ಲಿ ಕಳ್ಳತನ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದ ಬಳಿ ಇರುವ ಮಲ್ಲಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶಿಡ್ಲಘಟ್ಟ ನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.

ಶಿಡ್ಲಘಟ್ಟ ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ 234ರ ಸಂಚಾರ ಹೆಚ್ಚಾಗಿ ಇರುವ ಮಾರ್ಗದಲ್ಲಿ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೂದಾಳದ ಮಲ್ಲಿ ಮಲ್ಲೇಶ್ವರ ದೇವಾಲಯದಲ್ಲಿ ಸಿಸಿ ಕ್ಯಾಮೆರಾ ಕಿತ್ತು ಬಿಸಾಡಿದ್ದಾರೆ. ನಂತರ ಎರಡು ಬಾಗಿಲುಗಳನ್ನು ಕಿತ್ತಿರುವ ಕಳ್ಳರು ಗರ್ಭ ಗುಡಿಯ ಕಬ್ಬಿಣದ ಬಾಗಿಲನ್ನು ಕಿತ್ತು ಹಾಕುವ ಪ್ರಯತ್ನ ಸಫಲವಾಗಿಲ್ಲ.

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಾಗಿಲನ್ನು ಮುರಿದು ಒಳನುಗ್ಗಿ ಹುಂಡಿಯಲ್ಲಿ ಹಣದೋಚಿದ್ದಾರೆ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಇದ್ದು ಅದರಲ್ಲಿ ಮೂವರು ಕಳ್ಳರು ಲುಂಗಿ ಉಟ್ಟುಕೊಂಡು ಬಂದಿರುವುದು ಹಾಗೂ ಕಳ್ಳತನ ಮಾಡುತ್ತಿರುವುದು ರೆಕಾರ್ಡ್ ಆಗಿದೆ.

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳವು ಮಾಡಿದ ಗುಂಪೆ ಮಲ್ಲೆ ಮಲ್ಲೇಶ್ವರ ದೇವಾಲಯದಲ್ಲೂ ಕಳ್ಳತನ ಮಾಡಿದ್ದಾರಾ ಅಥವಾ ಬೇರೆಯವರಾ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಹಾಗೂ ಮಲ್ಲಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!