Sidlaghatta : ಚಿಂತಾಮಣಿ ರಸ್ತೆಯಲ್ಲಿನ ಪಂಪ್ ಹೌಸ್ (Pump House) ಬಳಿಯ ತೋಟಗಳಲ್ಲಿನ ಹಾಳುಬಾವಿಯೊಂದರಲ್ಲಿ (Water Well) ಬಿದ್ದಿದ್ದ ಯುವಕನನ್ನು ಅಗ್ನಿಶಾಮಕ ದಳದವರು (Fire Fighters) ಭಾನುವಾರ ರಕ್ಷಿಸಿದ್ದಾರೆ (Rescue).
ಶನಿವಾರ ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ರೇಣುಕಾ ಎಲ್ಲಮ್ಮ ಹಸಿಕರಗ ಮಹೋತ್ಸವವನ್ನು ನೋಡಲು ಸ್ಥಳೀಯ ಮಹಿಳೆಯರು ಮತ್ತು ಹುಡುಗರು ಗುಂಪುಗೂಡಿ ನೋಡುತ್ತಿರುವ ವೇಳೆಯಲ್ಲಿ ಜನ ಜಾಸ್ತಿ ಎಂದು ಪೊಲೀಸರು ಗದರಿಸಿ ಓಡಿಸಿದಾಗ ಓಡಿ ಹೋಗುವ ಸಂದರ್ಭದಲ್ಲಿ ಹಾಳು ಬಾವಿಗೆ ಹುಡುಗನೊಬ್ಬ ಬಿದ್ದಿದ್ದಾನೆ. ರಾತ್ರಿಯೆಲ್ಲ ಬಾವಿಯಲ್ಲಿದ್ದ ಹುಡುಗನನ್ನು ಬೆಳಗ್ಗೆ ನೋಡಿಕೊಂಡ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪುನೀತ್ ಎಂಬ 14 ವರ್ಷದ ಹುಡುಗನ ಒಂದು ಕೈ ಮತ್ತು ಒಂದು ಕಾಲು ಮುರಿದಿದೆ. ರಾತ್ರಿಯಿಡೀ ಬಾವಿಯಲ್ಲಿದ್ದ ಹುಡುಗನನ್ನು ಭಾನುವರ ಬೆಳಗ್ಗೆ ತೋಟದ ಮಾಲೀಕ ಶಶಿಧರ್ ನೋಡಿ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದ್ದಾರೆ. ಅವರು ಬಂದ ನಂತರ ಹಗ್ಗಗಳನ್ನು ಬಿಟ್ಟು ಸ್ಥಳೀಯ ತಲದುಮ್ಮನಹಳ್ಳಿ ಉದಯಕುಮಾರ್ ಅವರನ್ನು ಇಳಿಸಿ ಹುಡುಗನನ್ನು ಮೇಲಕ್ಕೆ ಎತ್ತಲಾಯಿತು. ರಾತ್ರಿ ಒಂದು ಗಂಟೆಯಲ್ಲಿ ಬಿದ್ದ ಹುಡುಗನನ್ನು ಮರುದಿನ ಅಂದರೆ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೂ ಹರಸಾಹಸ ಮಾಡಿ ಮೇಲೆ ಎತ್ತಲಾಯಿತು.
ಶಿಡ್ಲಘಟ್ಟ ತಾಲೂಕಿನ ತಲದುಮ್ಮನಹಳ್ಳಿ ಗ್ರಾಮದ ಉದಯ್ ಕುಮಾರ್ ಎಂಬಾತ ಬಾಯೊಳಕ್ಕೆ ತಿಳಿದು ಮೇಲಕ್ಕೆತ್ತಲು ಸಹಾಯ ಮಾಡಿದರು.
ಹುಡುಗನನ್ನು ಹೆಚ್ಚಿನ ಚಿಕಿತ್ಸೆಗೆ ಪುನೀತ್ ಅನ್ನು ಅವನ ತಾಯಿ ಪುಷ್ಪವತಿ ಜೊತೆ ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ಕಳಿಸಲಾಯಿತು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಠಾಣಾಧಿಕಾರಿ ಕರಿಯಪ್ಪ, ಅಧಿಕಾರಿಗಳಾದ ವಿ.ಆರ್.ಶ್ರೀನಿವಾಸ್, ಮುನಿಕೃಷ್ಣ, ಕಿರಣ್, ರೇವಣ್ಣ, ಅಶೋಕ್, ಮಾಲ್ತೇಶ್, ಆನಂದಪ್ಪ ಹಾಜರಿದ್ದರು.