27.8 C
Bengaluru
Wednesday, November 6, 2024

SJCIT ಕನ್ನಡ ಸಿಂಚನ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರದ ಎಸ್‌ಜೆಸಿ ತಾಂತ್ರಿಕ ವಿದ್ಯಾಲಯದಲ್ಲಿ (S.J.C. Institute of Technology) ಬುಧವಾರ ಕನ್ನಡ ರಾಜೋತ್ಸವ (Kannada Rajyotsava), ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಕನ್ನಡ ಸಿಂಚನ ಕಾರ್ಯಕ್ರಮವನ್ನು ನಡೆಸಲಾಯಿತು.

Chikkaballapur SJCIT Kannada Rajyotsava

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಹಂಪ ನಾಗರಾಜಯ್ಯ “ದೇಶದಲ್ಲಿಯೇ ಭಾಷಾ ಸಾಮರಸ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯು ಸಾಕ್ಷಿಯಾದುದು. ಇಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಸಾಮರಸ್ಯವಿದೆ. ಕರ್ನಾಟಕದ ನೆಲದಲ್ಲಿ ಎಲ್ಲ ಭಾಷೆಯವರು ಇದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಜನರು ತೆಲುಗು ಮಾತನಾಡುವರು. ಭಾಷೆ ಕಾರಣಕ್ಕೆ ನಾವು ಆಂಧ್ರಕ್ಕೆ ಹೋಗುತ್ತೇವೆ ಎಂದು ತೆಲುಗು ಮಾತನಾಡುವವರು ಹೇಳಲಿಲ್ಲ. ಅಷ್ಟು ಪ್ರೀತಿಯಿಂದ ಕನ್ನಡಿಗರು ಅವರನ್ನು ನಡೆಸಿಕೊಂಡಿದ್ದಾರೆ. ಇದು ಸರ್ವ ಜನಾಂಗದ ಶಾಂತಿಯ ತೋಟ. ವಿದ್ಯಾರ್ಥಿಗಳು ಸರಸ್ವತಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್, ಮಂಗಳನಾಥ ಸ್ವಾಮೀಜಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಜಿ.ಟಿ.ರಾಜು, ಕುಲಸಚಿವ ಜೆ.ಸುರೇಶ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಿವರಾಮರೆಡ್ಡಿ, ಎಲ್ ಆ್ಯಂಡ್ ಟಿ ನಿರ್ಮಾಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಚ್.ಶ್ರೀಧರ ಹಂಡೆ ಮತ್ತಿತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!