Gauribidanur : ಇತ್ತಿಚೆಗೆ ಸುರಿದ ಮಳೆಗೆ ಗೌರಿಬಿದನೂರು ತಾಲೂಕಿನ ಮುದುಗಾನಕುಂಟೆ (Muduganakunte) ಗಂಗಾಭಾಗೀರಥಿ ದೇವಸ್ಥಾನದ ಬಳಿಯಿರುವ ಕೆರೆಯು ಭರ್ತಿಯಾಗಿ ಸಮೀಪದಲ್ಲೇ ಇರುವ ಸಾಮಾಜಿಕ ಅರಣ್ಯ ವಿಭಾಗ ನರ್ಸರಿ (Social Forest Department Nursery) ಸಂಪೂರ್ಣವಾಗಿ ಮುಳುಗಡೆ (Drown) ಯಾಗಿದೆ.
ಸಾಮಾಜಿಕ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ಆರ್.ದಿವ್ಯ ಮಾತನಾಡಿ “ಗಿಡಗಳನ್ನು ಬೆಳೆಸಲು ಆಸರೆಯಾಗಿದ್ದ ಮುದುಗಾನ ಕುಂಟೆಯ ನರ್ಸರಿಯು ಕೆರೆಯ ಹಿನ್ನೀರಿನಲ್ಲಿ ಮುಳುಗಿರುವುದರಿಂದ ಕೆಲವು ಸಣ್ಣ ಗಿಡಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ಬೆಳೆಸಿ ಪೋಷಿಸಲು ಸ್ಥಳಾವಕಾಶವಿದೇ ಇದಕ್ಕೆ ಅವಕಾಶ ನೀಡುವಂತೆ ಸ್ಥಳೀಯ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದ್ದು ಅವರ ಆದೇಶ ಮತ್ತು ಸ್ಥಳೀಯ ಶಾಸಕರ ಸೂಚನೆಗೆ ಕಾಯುತ್ತಿದ್ದೇವೆ. ಪ್ರಸ್ತುತ ಬೊಮ್ಮಶೆಟ್ಟಹಳ್ಳಿ ಯಲ್ಲಿರುವ ಇಲಾಖೆಯ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲು ಮುಂದಾಗಿದ್ದೇವೆ” ಎಂದು ಹೇಳಿದರು.
ಕೆರೆಯ ಹಿನ್ನೀರಿನಲ್ಲಿ ಮುಳುಗಿರುವ ನರ್ಸರಿಯಲ್ಲಿನ ಗಿಡಗಳನ್ನು ಕೂಲಿ ಕಾರ್ಮಿಕರು ಸ್ಥಳಾಂತರಿಸಿದರು.