Chikkaballapur :
![Sri Kaiwara Yogi Nareyana Jayanthi Chikkaballapur](https://chikkaballapur.com/wp-content/uploads/2023/03/07MarChikkaballapur-1024x683.jpg)
ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಂದಿ ರಂಗ ಮಂದಿರದಲ್ಲಿ ಕೈವಾರ ತಾತಯ್ಯ ಜಯಂತಿ (Sri Kaiwara Yogi Nareyana Jayanti) ಮಂಗಳವಾರ ಆಯೋಜಿಸಲಾಗಿತ್ತು.
ಚಿಂತಾಮಣಿ
![Sri Kaiwara Yogi Nareyana Jayanthi Chintamani](https://chikkaballapur.com/wp-content/uploads/2023/03/07MarChintamani-1024x683.jpg)
ಚಿಂತಾಮಣಿ ತಾಲ್ಲೂಕಿನ ಪುರಾಣ ಪ್ರಸಿದ್ಧ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಹುಣ್ಣಿಮೆ ಯಂದು ಕೈವಾರ ತಾತಯ್ಯ ಜಯಂತಿ ಪ್ರಯುಕ್ತ ಶ್ರೀ ತಾತಯ್ಯನವರಿಗೆ ವಿಶೇಷ ಪೂಜೆ, ಬೆಳಿಗ್ಗೆ ಘಂಟಾನಾದ, ಗೋಪೂಜೆ, ಸುಪ್ರಭಾತದೊಂದಿಗೆ ವಿಶೇಷ ಅಭಿಷೇಕ, ಅಷ್ಟಾವದಾನ ಸೇವೆ ಸಲ್ಲಿಸಲಾಯಿತು.
ಮಠದ ಧರ್ಮಾಧಿಕಾರಿ ಎಂ.ಆರ್. ಜಯರಾಂ ದಂಪತಿ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚೇಳೂರು
![Sri Kaiwara Yogi Nareyana Jayanthi Chelur](https://chikkaballapur.com/wp-content/uploads/2023/03/07MarChelur-1024x683.jpg)
ಚೇಳೂರು ಗ್ರಾಮಸ್ಥರು ಪಟ್ಟಣದ ಎಂ.ಜಿ ವೃತ್ತದಲ್ಲಿ ಯೋಗಿನಾರೇಯಣ ಯತೀಂದ್ರರ ಜಯಂತ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಾದಲಿ
![Sri Kaiwara Yogi Nareyana Jayanthi Sadali](https://chikkaballapur.com/wp-content/uploads/2023/03/07MarSadali-1024x683.jpg)
ಬಲಿಜ ಸಮುದಾಯ ಹಾಗೂ ಕೈವಾರ ತಾತಯ್ಯನವರ ಭಕ್ತರಿಂದ ಯೋಗಿ ನಾರೇಯಣ ತಾತಯ್ಯನವರ ಜಯಂತ್ಯುತ್ಸವದ ಅಂಗವಾಗಿ ಸಾದಲಿ ಗ್ರಾಮದಲ್ಲಿ ತಾತಯ್ಯ ನವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.
ಶಿಡ್ಲಘಟ್ಟ
![Sri Kaiwara Yogi Nareyana Jayanthi Sidlgahtatta](https://chikkaballapur.com/wp-content/uploads/2023/03/07MarSidlaghatta-1024x683.jpg)
ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕಾಲಜ್ಞಾನಿ ಯೋಗಿನಾರೇಯಣ ಕೈವಾರ ತಾತಯ್ಯನವರ 297ನೇ ಜಯಂತ್ಯುತ್ಸವ ಆಚರಿಸಲಾಯಿತು.