Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಕೈವಾರ ತಾತಯ್ಯರ ಜಯಂತಿಯ (sri kaiwara yogi nareyana jayanti) (Athmabodhamruta) ಪ್ರಯುಕ್ತ ಭಾನುವಾರ ಆತ್ಮಬೋಧಾಮೃತ ಪ್ರವಚನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ “ಅಂತರಂಗದ ಸಾಧಕ ಋಷಿಮುನಿ ಕೈವಾರದ ತಾತಯ್ಯನವರು ಮರುಜೀವವನ್ನು ಸೃಷ್ಟಿಸುವ ಶಕ್ತಿಯನ್ನು ಪಡೆದಿದ್ದರು” ಎಂದು ತಿಳಿಸಿದರು. ಬ್ರಹ್ಮಾಂಡಪುರಿ ಶತಕದ ಕುರಿತಾಗಿ ವಿದ್ವಾಂಸ ಜೋಸ್ಯುಲ ಸದಾನಂದಶಾಸ್ತ್ರಿ ಉಪನ್ಯಾಸ ನೀಡಿದರು. ಕೈವಾರ ತಾತಯ್ಯರ ಜಯಂತಿ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಆರಂಭವಾಯಿತು. ಕೈವಾರದ ವಿದ್ವಾನ್ ತಿಪ್ಪರಾಜು ತಂಡದವರಿಂದ ನಾದಸ್ವರವಾದನ ನಡೆಯಿತು. ಪಂಚಾಮೃತ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಿತು.
ಕೈವಾರ ಮಠ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಂಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಕೆ.ನರಸಿಂಹಪ್ಪ, ಗಣೇಶ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್, ಕೆ.ವಿ.ಸುರೇಶ್, ಬಿ.ಎನ್.ಕೃಷ್ಣಯ್ಯ, ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.