Chikkaballapur : ವಿಜಯನಗರ ಸಾಮ್ರಾಜ್ಯದ ಅರಸ ಕನ್ನಡರಾಜ್ಯ ರಮಾರಮಣ “ಶ್ರೀಕೃಷ್ಣದೇವರಾಯ”ರ 555ನೇ ಜಯಂತಿ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುತ್ತಿರುವ ಶ್ರೀಕೃಷ್ಣದೇವರಾಯರ ರಥವು (Sri Krishna Devaraya Ratha) ಮಂಗಳವಾರ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿತು.
ಎಂ.ಜಿ ರಸ್ತೆಯ ಮರಳುಸಿದ್ಧೇಶ್ವರ ದೇವಾಲಯದ ಬಳಿ ರಥವನ್ನು ಬರ ಮಾಡಿಕೊಂಡ ಬಲಿಜ ಸಮುದಾಯದವರು, ನಂತರ ಯೋಗಿನಾರೇಯಣ ಯತೀಂದ್ರರ ದೇವಾಲಯಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿದರು. ಬಳಿಕ ವಿವಿಧ ಕಲಾತಂಡಗಳೊಂದಿಗೆ ನಗರದಲ್ಲಿ ರಥ ಸಂಚರಿಸಿ ಎಂ.ಜಿ ರಸ್ತೆ, ಬಿ.ಬಿ ರಸ್ತೆಯ ಮೂಲಕ ಸಾಗಿದ ರಥವನ್ನು ದೊಡ್ಡಬಳ್ಳಾಪುರಕ್ಕೆ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್, ಪಂಚಗಿರಿ ಮತ್ತು ಕೆ.ವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ನವೀನ್ ಕಿರಣ್, ಬಲಿಜ ಸಮುದಾಯದ ಮುಖಂಡರು ಭಾಗಿಯಾಗಿದ್ದರು.