Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಶ್ರೀನಿವಾಸ ಸಾಗರದಲ್ಲಿ (Srinivasa Sagar) ಮುಳುಗಿ (drowning) ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ತೀವ್ರ ಶೋಕವನ್ನುಂಟುಮಾಡಿದೆ.
ಮೃತರನ್ನು ಚಿಕ್ಕಬಳ್ಳಾಪುರದ 17ನೇ ವಾರ್ಡ್‌ನಲ್ಲಿ ವಾಸವಾಗಿದ್ದ ಬಷೀರಾ (43), ಫರೀನಾ ಬೇಗಂ (40) ಮತ್ತು ಇಮ್ರಾನ್ (40) ಎಂದು ಗುರುತಿಸಲಾಗಿದ್ದು ಕುಟುಂಬವು
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಕುಟುಂಬದ ಎಂಟು ಜನರೂ ಶ್ರೀನಿವಾಸ ಸಾಗರ ಪ್ರವಾಸಕ್ಕೆ ತೆರಳಿದ್ದರು. ಈಜಲು ನೀರಿಗೆ ಇಳಿದಾಗ ಅಚಾನಕ ಅವಘಡ ಸಂಭವಿಸಿ, ಮೂವರು ನೀರುಪಾಲಾಗಿದ್ದಾರೆ.
ಮೃತದೇಹಗಳನ್ನು ನಗರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.