Chikkaballapur : ಈ ಹಿಂದೆ ಚಿಂತಾಮಣಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದ ಕುಶಾಲ್ ಚೌಕ್ಸಿ (Kushal Chowksi) ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (superintendent of police) ನೇಮಕವಾಗಿದ್ದಾರೆ.
ವರ್ಗಾವಣೆಯಾದ ಪ್ರಯುಕ್ತ ಡಿ.ಎಲ್. ನಾಗೇಶ್ ಅವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬೀಳ್ಕೊಡುಗೆ ನೀಡಿದರು.