Chintamani : ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಚಿಂತಾಮಣಿ ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ಗುರುವಾರ ಮತ್ತು ಶುಕ್ರವಾರ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು (Taluk level Sports Meet) ಆಯೋಜಿಸಲಾಗಿತ್ತು. ಬಾಲಕ-ಬಾಲಕಿಯರಿಗೆ 100, 200, 400, 600, 800, 1500 ಮೀಟರ್ ಓಟ, 5000 ಮೀ ನಡಿಗೆ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಚಕ್ರ ಎಸೆತ, ಗುಂಡು ಎಸೆತ, ಜಾವಲಿನ್ ಎಸೆತ ಮತ್ತಿತರ ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್ “ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತವೆ” ಎಂದು ತಿಳಿಸಿದರು.
ತೀರ್ಪುಗಾರರಾಗಿ ಕೈವಾರದ ಡಿ.ರಮೇಶ್, ಶ್ರೀಧರ ಹಿರೇಮಠ, ರವೀಂದ್ರ ಹಳ್ಳುರ್, ಮಂಜುನಾಥ್, ಆರ್.ಶಂಕರ್, ಪರಮೇಶ್ ನಾಯಕ್, ಗಿರೀಶ್, ಚಿನ್ನಿ, ರಾಜಗೋಪಾಲ್, ಪುಷ್ಪಲತಾ, ಸುಜಾತ, ರೇಖಾ ಕಾರ್ಯನಿರ್ವಹಿಸಿದರು. ಫಕೃಸಾಬಿ, ಜಿ.ನರಸಿಂಹಪ್ಪ, ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.