Mulabagal : ಮುಳಬಾಗಿಲು ತಾಲ್ಲೂಕಿನ ತಾಯಲೂರು (Tayalur) ಗ್ರಾಮದಲ್ಲಿ ದ್ರೌಪದಮ್ಮ ದೇವಿ ಕರಗ (Droupadamma Karaga) ಮಹೋತ್ಸವ ಹಾಗೂ ಗಂಗಮ್ಮ ದೇವಿ ಗಂಗಶಿರಸ್ಸು ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರೆವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯವನ್ನು ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ದ್ರೌಪದಮ್ಮ ದೇವಿ ಮೂಲ ವಿಗ್ರಹವನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸಿ ಅಭಿಷೇಕ, ಹೋಮ, ಪಂಚಾಮೃತ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮುಂತಾದ ಪೂಜಾ ಕಾರ್ಯಕ್ರಮಗಳು ನಡೆದವು. ಧವಾರ ರಾತ್ರಿ ಕರಗದಾರಿ ಕರಗವನ್ನು ತಲೆಯ ಮೇಲೆ ಹೊತ್ತು ದೇವಾಲಯ ಮುಂಭಾಗದ ವೇದಿಕೆಯಲ್ಲಿ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು ನಂತರ ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಗ್ರಾಮದಲ್ಲಿ ಮೆರವಣಿಗೆಯ ನಂತರ ಕರಗದಾರಿ ಅಗ್ನಿಕುಂಡ ಪ್ರವೇಶ ಮಾಡುವ ಮೂಲಕ ಕರಗ ಮಹೋತ್ಸವ ಅಂತ್ಯವಾಯಿತು ಮತ್ತು ಗಂಗಶಿರಸ್ಸು ಗ್ರಾಮದಲ್ಲಿ ಮೆರವಣಿಗೆಯ ನಂತರ ಕೊನೆಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ದ್ರೌಪದಮ್ಮ ಹಾಗೂ ಗಂಗಮ್ಮ ದೇವಿಯ ದರ್ಶನ ಪಡೆದರು.