Sidlaghatta : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದ ದೇಶಪ್ರೇಮಿಗಳ ಸವಿನೆನಪಿಗಾಗಿ ರಸ್ತೆಯ ನಡುವಿನ ಸ್ಥಳದಲ್ಲಿ 75 ಗಿಡಗಳನ್ನು ನೆಡುತ್ತಿದ್ದೇವೆ ಎಂದು ಬಾಬು ಮೆಡಿಕಲ್ಸ್ ನ ಬಾಬಾಜಾನ್ ತಿಳಿಸಿದರು.
ನಗರದ ಹಳೇ ಕೆನರಾಬ್ಯಾಂಕ್ ಬಳಿಯಿಂದ ಮಾರಮ್ಮ ವೃತ್ತದವರೆಗೂ ಹಾಗೂ ದಿಬ್ಬೂರಹಳ್ಳಿ ರಸ್ತೆಯ ಪದವಿ ಕಾಲೇಜಿನ ಮುಂಭಾಗದ ರಸ್ತೆಯ ನಡುವಿನ ಸ್ಥಳದಲ್ಲಿ ಗಿಡಗಳನ್ನು ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿ ನೆಟ್ಟು ಅವರು ಮಾತನಾಡಿದರು.
ಪರಿಸರ ಕಾಳಜಿ ಹಾಗೂ ನಗರದಲ್ಲಿ ಹಸಿರು ವಾತಾವರಣ ಸೃಷ್ಟಿಸುವ ಉದ್ದೇಶದಿಂದ 75 ಗಿಡಗಳನ್ನು ನೆಡುತ್ತಿದ್ದೇವೆ. ಅವುಗಳಿಗೆ ಆಧಾರವಾಗಿ ಕಡ್ಡಿಗಳನ್ನು ನೆಡುತ್ತೇವೆ ಮತ್ತು ಆಗಿಂದಾಗ್ಗೆ ನೀರನ್ನು ಹಾಕಿ ಪೋಷಿಸುತ್ತೇವೆ. ಎಲ್ಲರೂ ಅವರವರ ಸ್ಥಳಗಳ ಬಳಿಯೇ ಗಿಡ ನೆಟ್ಟು ಪೋಷಿಸಿದಲ್ಲಿ ಮುಂದೆ ನಮ್ಮ ಊರು ಹಸಿರಿನಿಂದ ಕಂಗೊಳಿಸುತ್ತದೆ ಎಂದು ಹೇಳಿದರು.
ವಕೀಲ ಸತ್ಯನಾರಾಯಣ ಬಾಬು, ಸಿ.ಎ.ಎಸ್ ಏಜನ್ಸಿ ಕೌಸರ್ ಪಾಷ, ಅಸ್ಗರ್ ಪಾಷ, ರೆಹಮಾನ್, ಆನಂದ್, ಮೂರ್ತಿ, ಸಿತಾರಾ ಪ್ರೆಸ್ ರಹಮತ್, ಶಾಂತಮ್ಮ, ಮುನಿರಾಜು ಹಾಜರಿದ್ದರು.