Chikkaballapur : ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳ (Unaided Private School College) ಸಂಘದ ವತಿಯಿಂದ ಚಿಕ್ಕಬಳ್ಳಾಪುರ ನಗರದ ಎಸ್‌ಜೆಸಿಐಟಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ (Teachers’ Day) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ “ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಖಾಸಗಿ ಶಾಲೆ ಶಿಕ್ಷಕರು ಅಪಘಾತ ಅಥವಾ ಕಾಯಿಲೆಯಿಂದ ಮೃತಪಟ್ಟರೆ ಅವರ ಮಕ್ಕಳ ಶಿಕ್ಷಣ ಮತ್ತು ವಿವಾಹದ ಜವಾಬ್ದಾರಿ ಹೊರಲು ಸಿದ್ಧ. ಖಾಸಗಿ ಶಾಲೆ ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸುವರು. ಒಂದು ಕಡೆ ಕೆಲಸದ ಒತ್ತಡ ಮತ್ತೊಂದು ಕಡೆ ಆಡಳಿತ ಮಂಡಳಿಯ ಒತ್ತಡ ಇರುತ್ತದೆ. ದುಡಿದಿದ್ದನ್ನು ಹೆಂಡತಿ, ಮಕ್ಕಳು ಎಂದು ಜೀವನಕ್ಕೆ ಖರ್ಚು ಮಾಡುವರು. ಅಂತಿಮ ಕಾಲದಲ್ಲಿ ಜೀವನ ಕಷ್ಟವಾಗುತ್ತದೆ. ದುಡಿಯುವಾಗ ಒಂದಿಷ್ಟು ಹಣವನ್ನು ಉಳಿತಾಯ ಮಾಡಿ” ಎಂದು ತಿಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಸಂಘದ ಗೌರವಾದ್ಯಕ್ಷ ಕೆ.ವಿ.ನವೀನ್ ಕಿರಣ್,ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಎಸ್‌ಜೆಸಿಐಟಿ ಕಾಲೇಜು ಪ್ರಾಂಶುಪಾಲ ರಾಜು ಹಾಗೂ ಖಾಸಗಿ ಶಾಲಾ ಕಾಲೇಜುಗಳ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು .