Gauribidanur : ವಾಟದಹೊಸಹಳ್ಳಿ(Vatadahosahalli) ಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ರೈತರು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ (farmers protest) 11ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ತಮಟೆ ಚಳವಳಿಯನ್ನು ಹಮ್ಮಿಕೊಂಡು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ ಮಾತನಾಡಿ, “ನಮ್ಮ ಹೋರಾಟಕ್ಕೆ ಅಧಿಕಾರಿಗಳೂ ಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ. ರೈತರು ದೇಶದ ಬೆನ್ನೆಲುಬು, ಆದರೆ ಅವರನ್ನೇ ಹಿಂಸಿಸುತ್ತಿದ್ದಾರೆ. ₹65 ಕೋಟಿ ತೆರಿಗೆ ಹಣ ವ್ಯರ್ಥವಾಗುತ್ತದೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಮಧು ಸೂರ್ಯನಾರಾಯಣರೆಡ್ಡಿ, ಹರ್ಷವರ್ಧನ್ ರೆಡ್ಡಿ, ರವಿಚಂದ್ರರೆಡ್ಡಿ, ಕೋಡಿರ್ಲಪ್ಪ ಸೇರಿದಂತೆ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
