Monday, October 2, 2023
HomeSidlaghattaಆದಿಚುಂಚನಗಿರಿ ಮಠದ ಸುಪರ್ಧಿಗೆ ಪ್ರೌಢಶಾಲೆ ಹಸ್ತಾಂತರ

ಆದಿಚುಂಚನಗಿರಿ ಮಠದ ಸುಪರ್ಧಿಗೆ ಪ್ರೌಢಶಾಲೆ ಹಸ್ತಾಂತರ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿನ (Dibburahalli) ಶ್ರೀವೆಂಕಟೇಶ್ವರ ಪ್ರೌಢಶಾಲೆಯನ್ನು (Sri Venkateshwara High School) ಆದಿಚುಂಚನಗಿರಿ ಮಠದ (Sri Adichunchanagiri Mutt) ಸುಪರ್ಧಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalananda Swamiji) ಅವರು ಮಾತನಾಡಿದರು.

ನಮ್ಮ ಮಠದಿಂದ ಎಲ್ಲ ದಾನಗಳಿಗಿಂತಲೂ ವಿದ್ಯಾದಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನ್ನ ತಿಂದದ್ದನ್ನು ಕೊಟ್ಟದ್ದನ್ನು ಮರೆಯಬಹುದು, ಅದು ಕ್ಷಣಿಕ ಆ ಒಂದೊತ್ತಿನ ಹಸಿವನ್ನು ಮಾತ್ರವೇ ನೀಗಿಸಬಹುದು. ಆದರೆ ಎದೆಯಲ್ಲಿ ಬಿದ್ದ ಅಕ್ಷರ ಉಸಿರು ಇರುವ ತನಕ ಜತೆಯಲ್ಲಿರುತ್ತದೆ ಎಂದರು.

ನಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲಿ ಎನ್ನುವ ಮನೋಭಾವ ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತರಲ್ಲಿ ಮೂಡಿರುವುದು ಸಂತಸದ ವಿಷಯ. ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಉದ್ದೇಶದಂತೆ ದೇಶದ ಉದ್ದಗಲಕ್ಕೂ ಹಳ್ಳಿಯಿಂದ ಡೆಲ್ಲಿತನಕವಲ್ಲದೆ ಅಮೇರಿಕಾದಲ್ಲೂ ನಮ್ಮ ಮಠದ ಶಾಲಾ ಕಾಲೇಜುಗಳು, ಹಾಸ್ಟೆಲ್‍ಗಳಿದ್ದು ವಿದೇಶಗಳಲ್ಲೂ ನಮ್ಮ ಹಳ್ಳಿಯ ಹುಡುಗರು ಓದುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ವಿಚಾರವಾಗಿದೆ ಎಂದು ಹೇಳಿದರು.

ಈ ಹಳ್ಳಿಯಲ್ಲಿನ ಶಾಲೆಯನ್ನು ನಮ್ಮ ಮಠದ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರೂ ಎಲ್ಲವೂ ಮಠದ ನಿಯಂತ್ರಣಕ್ಕೆ ಒಳಪಡೊಲ್ಲ. ಶಿಸ್ತು ಶ್ರದ್ಧೆಯಂತ ಕೆಲವೊಂದು ನಿಯಮಗಳಲ್ಲಷ್ಟೆ ಬದಲಾವಣೆ ಕಾಣಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಸಿಗಲಿದೆ. ಇನ್ನುಳಿದಂತೆ ಎಲ್ಲವೂ ಮುಂದುವರೆಯಲಿದೆ ಇದು ನಿಮ್ಮ ಶಾಲೆಯೆ ಆಗಿರಲಿದೆ ಎಂದರು.

ಶಾಲೆಯ ಆಡಳಿತ ಮಂಡಳಿಯವರು ಶಾಲೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಶ್ರೀಗಳ ಮೂಲಕ ಮಠಕ್ಕೆ ಹಸ್ತಾಂತರಿಸಿದರು. ಮಠದ ಭಕ್ತರು ಶ್ರೀಗಳಿಗೆ ಕಾಣಿಕೆಯನ್ನು ಸಮರ್ಪಿಸಿ ನಮಿಸಿದರು. ಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮುಖ್ಯ ಶಿಕ್ಷಕರಿಗೆ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

50 ಲಕ್ಷ ರೂ ನೆರವು

ಶಾಲೆಯ ಒಟ್ಟಾರೆ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಎಚ್.ಡಿ.ದೇವೇಗೌಡ ಮತ್ತು ಜೆ.ಪಿ.ನಾರಾಯಣ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ 50 ಲಕ್ಷ ರೂ ಡಿ.ಡಿ ಸ್ವಾಮೀಜಿಗೆ ನೀಡಿದರು.

ಇದಕ್ಕೂ ಮೊದಲು ಶ್ರೀಗಳು ದಿಬ್ಬೂರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ನೂರಾರು ವಿದ್ಯಾರ್ಥಿಗಳು, ಮುತ್ತೈದೆಯರು ಕಳಶ, ಡೋಲು ವಿರಗಾಸೆ ಇನ್ನಿತರೆ ಸಾಂಪ್ರದಾಯಿಕ ಕಲಾ ತಂಡಗಳೊಂದಿಗೆ ಶ್ರೀಗಳನ್ನು ವೇದಿಕೆಯವರೆಗೂ ಮೆರವಣಿಗೆ ನಡೆಸಲಾಯಿತು.

ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳಾನಂದನಾಥಸ್ವಾಮಿ, ಶಾಸಕ ವಿ.ಮುನಿಯಪ್ಪ, ಆಡಳಿತಾಧಿಕಾರಿ ಶಿವರಾಮರೆಡ್ಡಿ, ರಾಜ್ಯ ವಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕರುಗಳಾದ ಯಲುವಳ್ಳಿ ರಮೇಶ್, ಡಾ.ರಮೇಶ್, ಮೇಲೂರು ಬಿ.ಎನ್.ಸಚಿನ್, ಬಂಕ್ ಮುನಿಯಪ್ಪ, ಡಾ.ಧನಂಜಯರೆಡ್ಡಿ, ವಿಜಯಭಾವರೆಡ್ಡಿ, ಎಬಿಡಿ ಟ್ರಸ್ಟ್ ನ ರಾಜೀವ್‍ಗೌಡ, ಡಿ.ಸಿ.ಗೋಪಿನಾಥ್, ಡಿಎಸ್‍ಎನ್ ರಾಜು ಹಾಜರಿದ್ದರು.

Join SIDLAGHATTA Telegram Channel

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES
- Advertisment -

Most Popular

error: Content is protected !!