Chikkaballapur : ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ (Whip Violation) ಆರೋಪದ ಮೇಲೆ Congress ನ ಆರು ಸದಸ್ಯರನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಅನರ್ಹಗೊಳಿಸಿದ್ದಾರೆ (Disqualification).
2ನೇ ವಾರ್ಡ್ ಸದಸ್ಯೆ ರತ್ನಮ್ಮ, 22ನೇ ವಾರ್ಡ್‌ನ ಸ್ವಾತಿ ಎಂ., 24ನೇ ವಾರ್ಡ್‌ನ ಅಂಬಿಕಾ, 27ನೇ ವಾರ್ಡ್‌ನ ವಿ. ನೇತ್ರಾವತಿ, 7ನೇ ವಾರ್ಡ್‌ನ ಸತೀಶ್, 13ನೇ ವಾರ್ಡ್‌ನ ನಿರ್ಮಲಪ್ರಭು ಅನರ್ಹಗೊಂಡ ಸದಸ್ಯರು.
ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಸಂಸದ ಡಾ. ಕೆ. ಸುಧಾಕರ್ ನಡುವಣ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿತ್ತು.