Home News Chikkaballapur ವಿಶ್ವ ಗ್ಲಾಕೋಮಾ ಸಪ್ತಾಹ

ವಿಶ್ವ ಗ್ಲಾಕೋಮಾ ಸಪ್ತಾಹ

0
367
World Glaucoma Week jatha Chikkaballapur

Chikkaballapur : ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ (World Glaucoma Week) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಆವರಣದಿಂದ ಗ್ಲಾಕೋಮಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಸ್ಪತ್ರೆ ಆವರಣದಿಂದ ಆರಂಭವಾದ ಜಾಗೃತಿ ಜಾಥಾವು ಎಂ.ಜಿ. ರಸ್ತೆ ‌ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೆ ಸಾಗಿತು. ‌

ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್‌ಕುಮಾರ್ “ಗ್ಲಾಕೋಮಾಗಾಗಿ ನಿಮ್ಮ ಕಣ್ಣನ್ನು ಪರೀಕ್ಷಿಸಿಕೊಳ್ಳಿ, ನಿಮ್ಮ ದೃಷ್ಟಿ ಉಳಿಸಿಕೊಳ್ಳಿ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ಮಾರ್ಚ್ 18 ರವರೆಗೆ ಆಚರಿಸಲಾಗುತ್ತಿದ್ದು ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಗ್ಲಾಕೋಮಾದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. 40 ವರ್ಷ ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷಿಸಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ ಹಾಗೂ ಸಮೀಪ ದೃಷ್ಟಿ ದೋಷವಿರುವವರಲ್ಲಿ ಗ್ಲಾಕೋಮಾ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಗ್ಲಾಕೋಮಾಗೆ ಆರಂಭದ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಅತ್ಯಗತ್ಯ ಇಲ್ಲವಾದರೆ ಶಾಶ್ವತ ಅಂಧತ್ವ ಉಂಟಾಗುತ್ತದೆ. ಗ್ಲಾಕೋಮಾದಲ್ಲಿ ನೇರ ದೃಷ್ಟಿ ಸರಿಯಾಗಿದ್ದರೂ ದೃಷ್ಟಿ ವಲಯವು ಕುಗ್ಗುತ್ತಾ ಬರುತ್ತದೆ” ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜಿ.ಹರೀಶ್, ವೈದ್ಯರಾದ ವಾಣಿ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.


World Glaucoma Week

In observance of World Glaucoma Week, a Glaucoma Awareness Jatha was recently held in collaboration with the Department of Health and Family Welfare and the District Blindness Prevention Department at the Chikkaballapur District Hospital premises. The event aimed to raise public awareness about glaucoma and its potential consequences.

The awareness march began at the district hospital premises and proceeded along the M.G.road to the Govt Pre-University College. District Health and Family Welfare Officer Dr. S.S. Mahesh Kumar launched the jatha with the slogan “Check your eyes for glaucoma, save your vision”. The World Glaucoma Week is being observed until March 18, and the public is urged to be vigilant about the disease, which can rob them of their vision without any symptoms.

According to Dr. Kumar, people above the age of 40 should have their eye pressure checked at least once a year. Individuals with diabetes, high blood pressure, and nearsightedness are at a higher risk of developing glaucoma. Failure to treat glaucoma at an early stage can result in permanent blindness. Despite having normal direct vision, individuals with glaucoma may experience shrinking vision fields, he added.

The event was attended by several healthcare professionals, including District Hospital Resident Medical Officer Dr. Ramesh, District Leprosy Control Officer Dr. Shivakumar, District Health Education Officer G. Harish, Doctors Vani, Mahesh, and others. The public is encouraged to take note of the information shared during the awareness jatha and seek early medical attention if they experience any symptoms of glaucoma.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!